Tuesday, 12 November 2019

ದುಮ್ಮಿಸಾಲೆನ್ನಿರಣ್ಣ ದುಮ್ಮಿಸಾಲೆನ್ನಿರೊ ankita prasannavenkata

by ಪ್ರಸನ್ನವೆಂಕಟದಾಸರು
ದುಮ್ಮಿಸಾಲೆನ್ನಿರಣ್ಣ ದುಮ್ಮಿಸಾಲೆನ್ನಿರೊ ದುಮ್ಮಿಸಾಲೆನ್ನಿ ಪರಬೊಮ್ಮನಾಳು ಮೂರುರೂಪಕಮ್ಮಗೋಲನಳಿದನೊಡೆಯ ನಮ್ಮಗುರುಬಳಗವೆಂದುಪ.

ಮುಟ್ಟಿಸೆ ಸುದ್ದಿಯ ರಾಮನಟ್ಟಿದರೆ ರಕ್ಕಸರಕಟ್ಟಿಕುಟ್ಟಿ ಕುಣಪ ಮೆದೆಗಳೊಟ್ಟಿಲೊಟ್ಟಿದದಿಟ್ಟತನದಲ್ಲಿ ಲಂಕಾಪಟ್ಟಣ ಮಂದಿರ ಹೋಳಿಸುಟ್ಟು ಬೊಬ್ಬೆಯಿಟ್ಟ ಜಗಜಟ್ಟಿ ಹನುಮಪ್ಪನ 1

ಕುರುಕಂಟಕ ಠಕ್ಕಿಸಿ ಕೊಟ್ಟರಗಿನ ಮನೆಯಲಿಕಾಯಲೊರಗಿದರನುರುಹಿ ನಿಜರ ಹೊರಗೆ ಮಾಡಿದಕುರುಗಣವನಕ್ಕೆ ರಣದಿ ಎರಗಿ ಅಗ್ನಿಯಂತೆ ಹುರಿದಾವರಗದಾಧರ ಭೀಮ ಸಾರ್ವಭೌಮನ 2

ಧರೆಸಮಗ್ರರಾಜಕೆಂದು ಅರಸುಪದವಿಗಳು ಸೊಕ್ಕಿಸರಸವಾಡಿ ಸರಿಯನುಡಿಯೆ ಹರುಷತೀರ್ಥರುವಿರಸಪೋಕರಳಿದು ಸರ್ವಹರಿ ಸಮರ್ಪಣೇಕಚಿತ್ತವಿರಿಸಾ ಶ್ರೀ ಪ್ರಸನ್ನವೆಂಕಟರಸ ಸಮತೆನಾಡಿದ 3
********

No comments:

Post a Comment