RSS song .
ಎಂಥ ಬಲು ಸೊಬಗಿನದು ನಮ್ಮ ದೇಶ !
ಈ ನಮ್ಮ ತಾಯ್ನೆಲ ||ಪ||
ಉತ್ತರಕೆ ನೋಡಲ್ಲಿ ಯಾರಿಹನು? ಕಿರೀಟದಂತೆ
ಶೋಭಿಸುವ ಹಿಮರಾಜ ತಾನಿಹನು
ದಕ್ಷಿಣದ ಕಡೆ ನೋಡಲಲ್ಲಿ ವಿಶಾಲ ಸಾಗರ
ತಾನು ಮಾತೆಯ ಪಾದವನ್ನು ತೊಳೆಯುತಲಿರುವಾ,
ವೈಭವದ ನಾಡು ||೧||
ಗೋದಾವರಿ ಕೃಷ್ಣೆ ತುಂಗೆಯರು ಹರಿಯುವರು ಇಲ್ಲಿ
ನಾಡ ಮಕ್ಕಳ ಮುದದಿ ಪೋಷಿಪರು
ಭಾರತಾಂಬೆಗೆ ಹಾರದಂತೆ ಹರಿಯುತಿರುವಳು ತಾಯಿ ಗಂಗೆ
ನಾಡ ಮಕ್ಕಳ ಪಾಪ ತೊಳೆಯುವಳು, ಈ ಪುಣ್ಯಭೂಮಿ ||೨||
ಬಸವ ಶಂಕರ ಮಧ್ವಯತಿವರರು, ಬೆಳಗಿಸಿದರಿಲ್ಲಿ
ಹಿಂದು ಧರ್ಮದ ದಿವ್ಯ ಜ್ಯೋತಿಯನು
ಲಕ್ಷ್ಮಿ ಪದ್ಮಿನಿ ಶಿವ ಪ್ರತಾಪರು ಭಾರತಾಂಬೆಯ ವೀರ ಕುವರರು
ತೋರಿದರು ನಿಜ ಶೌರ್ಯ ಸಾಹಸವಾ, ಈ ವೀರಭೂಮಿ ||೩||
ಹಿಂದು ಭೂಮಿಯ ಪರಮ ವೈಭವವಾ,
ಸಾಧಿಸಲು ತೋರಿದ ಕೇಶವರ ಈ ಸಂಘಧ್ಯೇಯವ
ಸ್ವೀಕರಿಸಿ ನಿಜ ಬದುಕಿನಲ್ಲಿ, ಮುಂದೆ ಸಾಗು ಕಾರ್ಯಪಥದಲಿ
ಆಗಲೇ ನಿನ್ನ ಜೀವನ ಧನ್ಯ, ಈ ಕರ್ಮಭೂಮಿ ||೪||
***
eMtha balu sobaginadu namma dESa !
I namma tAynela ||pa||
uttarake nODalli yArihanu? kirITadaMte
SObhisuva himarAja tAnihanu
dakShiNada kaDe nODalalli viSAla sAgara
tAnu mAteya pAdavannu toLeyutaliruvA,
vaiBavada nADu ||1||
gOdAvari kRuShNe tuMgeyaru hariyuvaru illi
nADa makkaLa mudadi pOShiparu
BAratAMbege hAradaMte hariyutiruvaLu tAyi gaMge
nADa makkaLa pApa toLeyuvaLu, I puNyaBUmi ||2||
basava SaMkara madhvayativararu, beLagisidarilli
hiMdu dharmada divya jyOtiyanu
lakShmi padmini Siva pratAparu BAratAMbeya vIra kuvararu
tOridaru nija Sourya sAhasavaa, I vIraBUmi ||3||
hiMdu BUmiya parama vaiBavavA,
sAdhisalu tOrida kESavara I saMGadhyEyava
svIkarisi nija badukinalli, muMde sAgu kaaryapathadali
AgalE ninna jIvana dhanya, I karmaBUmi ||4||
***
No comments:
Post a Comment