ರಾಗ - : ತಾಳ -
ಅಭಂಗ ವಿಟ್ಠಲಾ ಯೆನ್ನಭವ ಭಂಗಗೊಳಿಸೈ l
ತ್ರಿಭುವನ ಪಾಲಕ ರಂಗ ನಿಜ ಭಕುತ ಸಂಗ ll ಪ Il
ಕಾಯಕದ ಭರದಿ ನಾಗೈವಪರಾಧಂಗಳ l
ತಾಯಿಯ ತೆರದಾವಘಾಯವಾಗದಂತೆ ll
ಕಾಯಿದು ರಕ್ಷಿಪ ಅಪ್ರಾಕೃತ ಕಾಯ ನೀ ಸ l
ಮಯ ಕಾಯದಿರೆನಗೆ ಬೇರುಪಾಯ ಕಾಣೆ ll 1 ll
ಆವೆಲ್ಲ ದೈವಗಳ ನಂಬಿ ಕೆಡಲೊಲ್ಲೆ ನಿನ್ನ l
ಭಾವದಿಂದಲಿ ನೋಡೆ ಸುಖವಿದೆಂದು ಬಲ್ಲೆ ll
ದಿವ್ಯ ಕರುಣತ್ವವಿಹ ನಿನ್ನಂಥ ದೇವರ ಈ l
ಭುವನದೊಳಾವಲ್ಲಿ ಕಾಣೆನೆಂದರಿತು ಬಂದೆ ll 2 ll
ತಿರುಗುವಂತೆ ಮಾಡೀಮನವ ನಿನ್ನ ಸುತ್ತ l
ಕರಗಿ ಕೊರಗಲೀ ಕಾಯ ನಿನ್ನ ನಾಮಸ್ಮರಿಸುತ್ತ ll
ಚಾರುಚರಿತ ಮುನಿ ಸ್ತೋತ್ರಪಾತ್ರಾ ಭವ l
ತಾರಕ ಸಿರಿ ಮೋಹನ್ನವಿಟ್ಠಲ ಕೃಪಾಂಬುಧೆ ll 3 ll
***
No comments:
Post a Comment