..
kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu
ವಿಶೇಷಸಂದರ್ಭ ಹಾಡು
ತಿಳುಪಿದೆನು ಪರಮ ದಯದಿಂದ
ತಿಳುಪಿದೆನು ಪರಮ ದಯದಿಂದ ಮುಂದಣ ಕಾರ್ಯ
ಒಳಿತು ಬಿನ್ನಪವÀ ಲಾಲಿಸಲಿಬಹುದಯ್ಯ ಪ
ಸಕಲ ದೇಶ ಕಾಲದಲ್ಲಿಪ್ಪ ಸಜ್ಜನರ
ಸಕಲ ಪರಿಯಲಿಂದ ಪೊರೆವ ದಾತ
ಅಕಳಂಕ ನರಸಿಂಹ ಹೊರತಿಲ್ಲೆಂದು
ಸಕಲರೂ ಪೇಳಲು ಕೇಳ ಬಲ್ಲೆ 1
ಇನ್ನಾರು ತರುವಾಯ ದಶಮತಿಯ ರಾಗಮವ
ಚನ್ನಾಗಿ ಪೇಳುವೆನೆಂಬುದೊಂದು
ನಿನ್ನ ವಚನಂಗಳು ಪುಸಿಯಾಗಬಾರದು
ಮನ್ನದಲ್ಲಿ ನೋಡಿಕೋ ಕರುಣ ಸಿಂಧೋ 2
ಬಡವಗೆ ಮಾತುಗಳು ಕೊಟ್ಟಿನ್ನು ತಾವಾಗಿ
ಒಡೆಯರೇ ತಪ್ಪಿದರೆ ಏನಂಬರೊ
ಮಡಿಯ ಹೊರಳುವೆ ನಿನ್ನ ಅಡಿಗೆ ಬೀಳುವೆ ಸ್ವಾಮಿ
ಕಡೆ ಹಾಯಿಸೊ ರಂಗ ಎನ್ನಂತರಂಗ 3
ಜನನಿ ಕಾಣಳು ಕಣ್ಣು ಕಿವಿಯು ಕೇಳದು ಅಣ್ಣ
ತನಯರು ಇಂದಿಗೂ ಜನಿಸಲಿಲ್ಲ
ಮನದಲ್ಲಿ ಹಲವು ಹಂಬಲಗಳೋಲ್ಯಾಡುತಿವೆ
ಜನಕ ಜನನೀ ತನಯ ನೀ ಎನಗೆ 4
ಆಸು ಲೋಕಗಳೆಲ್ಲ ನಿನ್ನವೆ ಸರಿ ಸ್ವಾಮಿ
ವಾಸುದೇವವಿಠಲ ಬಹುಕಾಲದಿ
ಭೂಸುರನ ಮಾಡಿ ಪುಟ್ಟಿಸಿದರೆ ಚಿರಕಾಲ
ಈ ಸುಧಾಪಾನ ನೀ ಮಾಡಿಸೆನಗೆ
***
No comments:
Post a Comment