Friday, 3 September 2021

ನರಸಿಂಹ ನರಸಿಂಹ ನಮಿಸುವೆನೊ ಘೋರ ankita vasudeva vittala

 ..

kruti by ವ್ಯಾಸತತ್ವಜ್ಞ ತೀರ್ಥರು vyasatatwajna teertharu 

ನರಸಿಂಹ ನರಸಿಂಹ ನಮಿಸುವೆನೊ ಘೋರ

ದುರಿತ ಬೆನ್ನಬಿದ್ದಿದೆ ಪರಿಹರಿಸೋ ಶ್ರೀ ನರಸಿಂಹ ll ಪ ll


ಪರಮೇಷ್ಠಿ ಹರ ಸುರಪತಿ ಮುಖರಾ l

ಸುರನಿಕರ ಪೊರೆವ ಪ್ರಭೋ  ಪ್ರವರ l

ದುರಿತವು ಅವರನ್ನ ಬಾಧಿಸದಂತೆ l

ಪೊರೆದ ಪರಿಯಿಂದ ಎನ್ನ ಪೊರೆಯೊ ll 1 ll


ಕಾಯ್ದು ತನ್ನಯ ತನ್ನ ತಂದೆಯ ಬಾಧೆ l

ಭಯದಿಂದ ಮನದಲ್ಲಿ ನಿನ್ನ ನೆನಿಯೆ  l

ದಯದಿಂದ ನೀ ಕಂಭದಲಿ ಬಂದು ಪೊರೆದಂತೆ ಎನ್ನ l

ಭಯ ಪರಿಯೆ ಶ್ರೀ ನರಸಿಂಹ ll 2 ll


ನಿನ್ನ ಪೆಸರೆಂದರೆ ದುರಿತಂಗಳು l

ತನ್ನಿಂದ ತಾನೆ ಜರಿಯುವವು l

ಚನ್ನಾಗಿ ಶರಣರ ಪೊರೆದದಕೆ l

ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ ll 3 ll


ನಖ ಮುಖ ಶಿಖಿ ತನ್ನ ನೆನಿಯೆ l

ಸುಖಿತರವಾಹೋದು ಶರಣರಿಗೆ l

ಮಖಭುಜ ರವಿ ಸಾಕ್ಷಿ ಇದಕಾಗಿರೆ ವಿಖಸನಾರ್ಚಿತಪಾದ l

ಸುಖಮಯನೆ ಶ್ರೀ ನರಸಿಂಹ ಕಾಯೊ ll 4 ll


ಅರಿದರೀಧರ ವರ ಕರಯುಗನೆ l

ಕರಯುಗ ಜಾನು ಶಿಖರದಲ್ಲಿಪ್ಪನೆ l

ಶಿರದಿಂದೊಪ್ಪುವ ಕರತಳನೆ l

ವರ ವಾಸುದೇವವಿಟ್ಠಲ ಪೊರೆಯೊ ಶ್ರೀ ನರಸಿಂಹ ಕಾಯೊ ll 5 ll

***


ನರಸಿಂಹ ನರಸಿಂಹ ನಮಿಸುವೆನೊ ಘೋರ

ದುರಿತ ಬೆನ್ನ ಬಿದ್ದಿದೆ ಪರಿಹರಿಸೋ ಶ್ರೀ ನರಸಿಂಹ ಪ


ಪರಮೇಷ್ಠಿ ಹರ ಸುರಪತಿ ಮುಖರಾ

ಸುರನಿಕರ ಪೊರೆವ ಪ್ರಭೊ ಪ್ರವರ

ದುರಿತವು ಅವರನ್ನ ಬಾಧಿಸದಂತೆ

ಪೊರೆದ ಪರಿಯಿಂದ ಎನ್ನ ಪೊರೆಯೊ 1


ಕಾಯ್ದು ತನ್ನಯ ತನ್ನ ತಂದೆಯ ಬಾಧೆ

ಭಯದಿಂದ ಮನದಲ್ಲಿ ನಿನ್ನ ನೆನಿಯೆ

ದಯದಿಂದ ನೀ ಕಂಭದಲಿ ಬಂದು ಪೊರೆದಂತೆ ಎನ್ನ

ಭಯ ಪರಿಯೆ ಪೊರೆ ಶ್ರೀ ನರಸಿಂಹ 2


ನಿನ್ನ ಪೆಸರೆಂದರೆ ದುರಿತಂಗಳು

ತನ್ನಿಂದ ತಾನೆ ಜರಿಯುವವು

ಚನ್ನಾಗಿ ಶರಣರ ಪೊರೆದದಕೆ

ನಿನ್ನವರೆಂದು ಕೇಳಿ ಬಲ್ಲೆ ಶ್ರೀ ನರಸಿಂಹ 3


ನಖ ಮುಖ ಶಿಖಿ ತನ್ನ ನೆನೆಯೆ

ಸುಖಿತರವಾಹೋದು ಶರಣರಿಗೆ

ಮಖಭುಜ ರವಿ ಸಾಕ್ಷಿ ಇದಕಾಗಿರೆ

ವಿಖನಸಾರ್ಚಿತ ಪಾದ

ಸುಖಮಯನೆ ಶ್ರೀ ನರಸಿಂಹ ಕಾಯೊ 4


ಅರಿದರೀಧರ ವರ ಕರಯುಗನೆ

ಕರಯುಗ ಜಾನು ಶಿರದಲ್ಲಿಪ್ಪನೆ

ಶಿರದಿಂದೊಪ್ಪುವ ಕರತಳನೆ

ವರ ವಾಸುದೇವವಿಠಲ ಪೊರೆಯೊ ಶ್ರೀ ನರಸಿಂಹ ಕಾಯೊ 5

***


No comments:

Post a Comment