Wednesday, 1 September 2021

ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ ankita shyamasundara haridasa stutih

 ..

ದಾಸರ ನೋಡಿರೈ ಮನದಭಿಲಾಷೆಯ ಬೇಡಿರೈ |

ಭಾಸುರ ಕಾರ್ಪರಾಧೀಶನಾ ಸನ್ನಿಧಿ

ವಾಸ ಕೃತನತ ಪೋಷಾ ||

ಹಿಂದೆ ಪ್ರಲ್ಹಾದನು ಮಾತೆಯ ಗರ್ಭದೊಳಿರಲು

ಅತಿ ಹರುಷದೊಳು

ಮುಂದೆ ಈತ ಹರಿಭಕ್ತಾಗ್ರೇಸರನೆಂದು

ಮನಸ್ಸಿಗೆ ತಂದು |

ಛಂದದಿ ಹರಿಪರನೆಂಬೊ ತತ್ವ ಬೋಧಿಸಿದ

ಜ್ಞಾನವ ಗರೆದ ||

ವೃಂದಾರಕ ಮುನಿಯೆಂದಿವರನು ಭಾವಿಸುತ

ಅಭಿವಂದಿಸುತ 1


ಅಲವ ಬೋಧ ಸಚ್ಛಾಸ್ತ್ರ ಧರ್ಮವ ಮುದದಿ

ತಿಳಿಗನ್ನಡದದಿ

ಸತಿ ಸುಳಾದಿ ರೂಪದಿ ವಿರಚಿಸಿ ದಯದಿ

ಸಾರುತ ಜಗದಿ |

ಬಲುವಿಧ ಭವದೊಳು ಬಳಲುವ ಸಜ್ಚನ ಕೊಲಿದ

ಕಲುಷವ ಕಳೆದ |

ಇಳೆಯೊಳು ಇವರು ಪೇಳಿದ ವಚನವು ವೇದ

ದೊಳಗಿನ ಸ್ವಾದ 2


ಈ ಮಹಾಕ್ಷೇತ್ರದ ಸ್ವಾಮಿ ನರಸಿಂಹ ಪಾದ

ಅರ್ಚಕರಾದ |

ಭೀಮಾರ್ಯರ ಸದ್ಭಕ್ತಿಗೆ ನೆಲಸಿಹರಿಲ್ಲಿ

ಅನುದಿನದಲ್ಲಿ ||

ನೇಮದಿ ತನ್ನನು ಸೇವಿಪ ಭಕುತರ ಕರವ

ಕರುಣದಿ ಪಿಡಿವ ||

ಶಾಮಸುಂದರನ ನಾಮ ಸುಧಾರಸವೆರದ

ಜಗದೊಳು ಮೆರೆದ 3

***


No comments:

Post a Comment