ಕಾಖಂಡಕಿ ಶ್ರೀ ಮಹಿಪತಿರಾಯರು
ಥಳ ಗುಟ್ಟೊಳುತೊಬ್ಬಳೆವಾಗೆದ ತಾ ವಳಗುಟ್ಟಲೆ ದಟ್ಟದ ಬೆಳಗು ತಾಂ ತಿಳಿಗೊಟ್ಟರೆ ಸದ್ಗುರು ಭಾಸುದು ತಾ ಕಳೆಮುಟ್ಟಿದು ನೋಡಲು ಶಾಶ್ವತ 1
ಅರಿಯೊ ಸುರಿಯೊ ಪರಮಾಮೃತ ಬೆರಿಯೊ ಗುರುವೆಂದು ನೀ ಸುಗುರುತಾ ಜರಿಯೊ ಮರಿಯೊ ಮದಗರ್ವನೆ ತಾ ನೆರಿಯೊ ಗುರುಪಾದಕೆ ನೀ ತ್ವರಿತ 2
ತಿಳಿ ಸರ್ಕನೆ ನಿನ್ನೊಳು ಬ್ಯಾಗ ತಾ ಅಳಿ ತರ್ಕದ ಮಾತಿನ ಗರ್ವನೆ ತಾ ತೊಳಿ ನರ್ಕಕೆ ಬೀಳುವ ತಾಮಸ ತಾ ಸುಳಿ ಗರ್ಕನೆ ಸದ್ಗುರು ಪಾದÀದಿ ತಾ 3
ಬಿಡು ಮರ್ಕಟ ಬುದ್ಧಿಯ ಭಾವನೆ ತಾ ಕೂಡು ಸರ್ಕನೆ ಸುಮ್ಮನೆ ಗುರುವಿಗೆ ತಾ ಸುಡು ನರ್ಕಕೆ ಬೀಳುವ ಪಾಶÀವ ತಾ ತೊಡು ಮರ್ಕಟವಾದ ಸದ್ಗುಣ ತಾ 4
ಹಿಡಿಯೊ ಪಡಿಯೊ ದೃಢಭಾವನೆ ತಾ ಜಡಿಯೊ ಒಡನೆ ಗುರುಪಾದನಿ ತಾ ಕಡಿಯೊ ಬಿಡದೆ ಭವಬಂಧನ ತಾ ಅಮೃತ 5
ನಡಿಯೊ ನುಡಿದಂತೆನೆ ಸನ್ನಮತ ಹಿಡಿಯೊ ಪಡೆದಂತೆನೆ ಪಾದವ ತಾ ಇಡದಂತೆನೆ ತುಂಬೆದ ಸದ್ಘನ ತಾ ಕಡೆಗಾಂಬುದು ನೋಡಿದು ಶಾಶ್ವತಾ 6
ತಿಳಿಯೊ ಬಳಿಯೊ ಒಳಗುಟ್ಟನೆ ತಾ ಹೊಳಿಯೊ ಸುಳಿಯೊ ನೆಲಿಗೊಂಡಿದು ತಾ ಕಳಿಯೊ ಅಳಿಯೊ ಅನುಮಾನವ ತಾ ಕಳೆಕಾಂತಿಯ ನಿನ್ನೊಳು ತುಂಬ್ಯದ ತಾ 7
ಒಳಗುಟ್ಟನೆ ಸಾಧಿಸಿ ನೋಡುವು ದೆಲ್ಲಾ ಥಳಗುಟ್ಟುದು ಸಾಸಿರ ಪದ್ಮ ದಳ ನೆಲೆಗೊಂಡರೆ ವಾಗುವ ತಾ ಸಫಲಾ ತಿಳಕೊಂಬುದು ಸದ್ಗುರು ಸ್ವಾಮಿ ಬಲ 8
ಬಿಡಬಾರದು ಸಂಗತಿ ಸಜ್ಜನರ ಹಿಡಿಬೇಕಿದು ಒಂದೇ ನೋಡಿ ಸ್ಥರ ಅಡಿ ಇಟ್ಟನೆ ಬಾಹುದು ಪುಣ್ಣಿದರಾ ಪಡಕೊಂಡರೆ ಅಹುದು ಇಹಪರ 9
ತಡಮಾಡದೆ ನೋಡುವುದೀ ಸುಪಥ ಪಡಿಬೇಕಿದು ಒಂದೇ ಸುಸ್ವಹಿತ ಒಡಗೂಡದೆ ಬಾರದು ಕೈಗೂಡಿ ತಾ ಎಡಬಲಕೆ ತುಂಬಿದೆ ತುಳುಕುತ 10
ಜಾಗರ ತಾ ಎಡಿಎಡಿಗೆ ಸಂದಿಸಿ ತುಂಬಿದೆ ತಾ ಬಡಿಸಿಟ್ಟೆದ ಭಾಗ್ಯದ ನಿಧಿಯು ತಾ ಪಡಕೊಳ್ಳೆಲೊ ಮಹಿಪತಿ ಪೂರ್ಣಹಿತ11
****
No comments:
Post a Comment