Wednesday, 1 September 2021

ಅಹುದಹುದು ದೀನ ಬಂಧು ಅಹುದಹುದು ದೀನಬಂಧು ankita mahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಅಹುದಹುದು ದೀನ ಬಂಧು ಅಹುದಹುದು ದೀನಬಂಧು|ಶ್ರೀ ಕೃಷ್ಣ| ಸಹಕಾರಿ ಶರಣ ಜನರಾ ಹರಿಯೇ ಪ 

ಕಪ್ಪೆಮರಿ ಅಂದರೇನು|ಕಾಯ್ದಿರುವಾ| ಅಪ್ಪವಿನೋಳು ಬಳಲುತ|ಹರಿಯೇ| ಸರ್ಪಶಯನೆಂದು ಕರೆಯೆ|ಬಂದೊದಗಿ| ಒಪ್ಪಿಕೊಳ್ಳಬೇಕು ದಯದಿ ಹರಿಯೇ 1 

ಪಕ್ಷಿತತ್ತಿಯು ಬೀಳಲು|ಭಾರತ ಮಹಾ| ಅಕ್ಷೋಹಿಣಿ ರಣದಲಿ ಸಲವೆಂದು| ಗಜ ಘಂಟೆಯಾ|ನೀ ಕೆಡಹಿ| ರಕ್ಷಿಸಿದ ಮುಸುಕಿ ಅವರ ಹರಿಯೇ 2

 ಕಬ್ಬುಲಿಗ್ಯಾತದ ರೂಪದೀ ಕಪಟದಲೀ| ಒಬ್ಬರಾಯನ ಕನ್ಯೆಯಾ ಭೋಗಿಸುತ| ನಿಬ್ಬುರಕ ನಿನ್ನ ನೆನೆಯೇ|ಗತಿಗೊಟ್ಟು| ಉಬ್ಬುಸವ ಕಳೆಯಲಿಲ್ಲದೇ ಹರಿಯೇ3

 ವ್ಯಭಿಚಾರಿ ಗಣಿಕೆ ತಾನು|ಧನವೀವ| ಪ್ರಭುಗಳೊಂದಿನ ಕಾಣದೇ ವಿರಕ್ತಿಯಲಿ| ವಿಭುನಿನ್ನೀ ಕೀರ್ತನೆಗಳಾ ಮಾಡಲಿಕ್ಕೆ| ಅಭಯ ಪದವಿತ್ತೆ ಬೇಗ ಹರಿಯೇ4

 ಹಿಂದಾದ ಕಥಿಗಳಿವನು|ಅಹುದಲ್ಲೋ| ಎಂದಾರು ಬಲ್ಲರಯ್ಯಾ ಮಹಿಪತಿ| ಕಂದರೊಡೆಯನೇ ಎನ್ನ ಕೈ ಪಿಡಿದ| ರಿಂದು ನಿಜವೆಂಬೇ ನಾನು ಹರಿಯೇ 5

***


No comments:

Post a Comment