Wednesday, 1 September 2021

ಓದಿ ಮರುಳಾದರಯ್ಯ ಬೋಧವಿಲ್ಲದೆ ಓದಿನೋಡಲದನರಿತು ಹರಿಯ ನೆನೆಯಲೊಲ್ಲದೆ ankita hayavadana

 ..

ಓದಿ ಮರುಳಾದರಯ್ಯ ಬೋಧವಿಲ್ಲದೆ

ಓದಿನೋಡಲದನರಿತು ಹರಿಯ ನೆನೆಯಲೊಲ್ಲದೆ ಪ.


ಪರತತ್ವವಿಚಾರವರಿಯದ ಪಾಪದಾವುದು ತನ್ನ

ಕರಣೇಂದ್ರಿಯ ಕಾಟಕೆ ಸಿಲುಕದ ಕರ್ಮದಾವುದು

ಪರಗತಿ ವಿಚಾರವಿಲ್ಲದ ನಿಜದಾವುದು

ಗುರುಚರಣ ಪರಿಚಯವಿಲ್ಲದ....ಯಾವುದು1


ಅಂತರಂಗ ಶುದ್ಧಿಯಿಲ್ಲದ ಕಂತೆಯಾವುದು ನಿತ್ಯ

ಶಾಂತಿ ಶಮದಮವಿಲ್ಲದ ಭ್ರಾಂತಿ ಯಾವುದು

ಸಂತತ ಸಮಾಧಾನದ ಚಿಂತೆಯಾವುದು ನಮ್ಮ

ಕಂತುಪಿತನ ನೋಡಗೊಡದ ಕಪಟ ದಾವುದು 2


ಮಧ್ವಮತದ ಮಾರ್ಗವನ್ನು ಮೀರಿದಾವುದು ಶ್ರುತಿ

ಸಿದ್ಧ ಹರಿಯ ಗುಣವ ಹಾಡಿಪಾಡದ್ಯಾವುದು

ವೃದ್ಧರನ್ನು ಕೆಣಕಿ ಕಾಡಿ ಕೊಂಬದಾವುದು ಅದು

ಸಿದ್ಧಯಮನ ಬಾಧೆಗೆ ಒಳಗಾಗುವದಾವುದು 3


ಸಾರತತ್ವ ಸುಧೆಯ ಸವಿಯ ದೂರಿದಾವುದು ಪರಿ-

ವಾರ ಜನರ ಪೊರೆವರುಪಚಾರ ದಾವುದು

ಸಾರಿ ತನ್ನ ಸಾಕ್ಷಿಗಿನ್ನು ಬಾರದಾವುದು ಅದು

ಕೀರನಾಕ....ಯಾ ಸಂಸ್ಕಾರ ದಾವುದು 4


ಅನ್ನದ ಜೀವ ಭಿನ್ನಹರಿ ಎನ್ನದಾವುದು ದ್ವಾಸು-

ಪರ್ನಪಥವ ಪಾ....ಮಾಡದಾವುದು

ಧನ್ಯ ಹಯವದನ ನಾನೆನ್ನುವುದು ಅದು

ಕುನ್ನಿಯಂತೆ ಹಲವು ಪರಿಯ ಕೂಗುವುದದು 5

***



No comments:

Post a Comment