Wednesday, 1 September 2021

ಅವನೆವೆ ಶರಣಾ ಗುರುಗರಡಿಯ ಮನಿಯೊಳು ಬೆರೆದು ankita gurumahipati

..

ಕಾಖಂಡಕಿ ಶ್ರೀ ಕೃಷ್ಣದಾಸರು

ಅವನೆವೆ ಶರಣಾ ಪ 

ಗುರುಗರಡಿಯ ಮನಿಯೊಳು ಬೆರೆದು | ಗುರುದಾಸರ ಸಂಗವ ಬಲಿದು | ಅರಿತಾವಿನಾ ಅಲ್ಲಿಯ ಕಳೆಗಳ ತಿಳಿದು 1 

ಹರಿದಾಡುವ ಚಂಚಲ ನೀಗಿ | ಗುರುಸೇವೆಯಲಿ ತತ್ಪರನಾಗಿ | ಕರುಣವ ಬೀರ್ವನು ಅರಿಸಖರೊಳಗಾಗಿ2 

ಆರಿಗೆ ಹೊಲ್ಲೆಯ ತಾ ನುಡಿಯಾ | ಆರಿಂದು ನಿಷ್ಟುರ ಪಡಿಯಾ | ಧರಿಯೊಳು ಸನ್ಮತ ಮಾರ್ಗದಿ ತಾ ನಡಿಯಾ3 

ದೋರಗಡುದೆ ಬಲ್ಲವಿಕೆಯನು | ಪರರವಗುಣವನು ಅರಿಸನು | ನೀರು ಹಾಲಿನ ಸಖ್ಯಕ ಪರಿಲಿಹನು4 

ತನುಧನ ಮದದೊಳು ಬೆರಿತಿರದೇ ಘನದೆಚ್ಚರಿಕೆಯ ಮರೆದಿರದೇ ನೆನೆವನು ಗುರುಮಹಿಪತಿಸ್ವಾಮಿಯ ಬಿಡದೇ5

***


No comments:

Post a Comment