..
kruti by ವೀರನಾರಾಯಣ Veeranarayana
ಕೊಳಲೂದೋ ಕೃಷ್ಣ ಕೊಳಲೂದೊ ಪ
ಕೊಳಲೂದಲು ಮನ ತಳೆವುದು ಮನವಿದೊಬಳಲಿಪ ಚಿಂತೆಯ ಕಳೆವುದು ನಾದೊ ಅ.ಪ.
ಸವಿಸವಿ ಸ್ವರಗಳು ಕಿವಿಗಳ ಹೊಗಲದು _ಭವಿಸುದೆನ್ನೊಳು ಭಕುತಿಯನಾದೊ 1
ತನು ಕೊಳವೆಯಲಿ ನಿನದುಸಿರನು ಕೊಡೆಇನಿದು ನುಡಿದು ಪಾವನ ತನುವಹುದೊ 2
ಸ್ವರಮಧುರತೆಯು ಶಿರದೊಳು ಚರಿಸುತೆನಿರುತ ನಿನ್ನಯ ಸ್ಮರಣೆಯ ನೀವುದೊ 3
ಮಧುರ ನಿನ್ನಯ ಗಾನವ ಕೇಳ್ವುದುಗದುಗು ವೀರನಾರಾಯಣನ ಮಹಾ ಪ್ರಸಾದೊ 4
***
No comments:
Post a Comment