Sunday, 1 August 2021

ಹರಿನಿನ್ನ ಕರುಣವಿರಾಲಾವ ಭಯವು ankita varadesha vittala

 ..

kruti by ವರದೇಶ ವಿಠಲರು varadesha vittala dasaru


ಹರಿನಿನ್ನ ಕರುಣವಿರಾಲಾವ ಭಯವು

ಸ್ಮರಣಿ ಮಾತ್ರದಿ ಸಕಲದುರಿತಗಳ ಪರಿಹರಿಪ ಪ


ಸಣ್ಣ ವಯದಲಿ ಶ್ರೀ ಜಗನ್ನಾಥದಾಸಾರ್ಯ

ಬನ್ನ ಬಡುತಿರೆ ವ್ಯಾಧಿ ಪೀಡೆಯಿಂದ

ಘನ್ನ ಕರುಣಾಭ್ದಿ ಶ್ರೀ ಗೋಪಾಲದಾಸರಾ -

ಬಿನ್ನಪವನಾಲಿಸಿ ರೋಗಮೋಚನ ಗೈದ 1


ದಾಸಕುಲರತ್ನ ಪ್ರಾಣೇಶ ದಾಸಾರ್ಯರ

ಆಸುವಂಶದ ತರುಳ ರೋಗದಿಂದಾ

ಯಾಸ ಬಡುವದು ಕೇಳಿ, ಆಶೆಯನೆ ತೊರೆದಿಹನು

ನೀ ಸಲಹ ಬೇಕಯ್ಯಾ ಕರುಣದಿಂದಲಿ ನೋಡಿ 2


ವರದೇಂದ್ರ ಗುರುವರರ ಸುರುಚಿರಾಲಯದಲ್ಲಿ

ಇರಳ್ಹಗಲು ನಿಮ್ಮ ನಾಮ ಸ್ಮರಿಸುವಂಥ

ತರುಳ ನೀ ಪರಿ ಪೀಡಿಸುವದುಚಿತವೇನೊ ಶ್ರೀ

ಹರಿ ವಿಚಾರಿಸಿ ನೀನೆಸಿದಯದಿಂದ ನೋಡೊ 3


ವಾಸವಾದ್ಯಮರನುತ ವಾಸುದೇವನೆ ನೀನು

ಈ ಸಮಯದೊಳಗಿವನ ಕರುಣದಿಂದ

ಪೋಷಿಸಲು ನಿನ್ನ ಪೊಂದಿರುವ ಸದ್ಭಕ್ತರ

ದಾಸನೆಂದೆನಿಸಿ ಜೀವಿಸಲಿಯನವರತ 4


ನಿನ್ನನೇ ನಂಬಿರುವೆ ನಿನ್ನನೇ ಪ್ರಾರ್ಥಿಸುವೆ

ಧನ್ವಂತ್ರಿ ನೀನೆನ್ನ ಮೊರೆಯಾಲಿಸೊ

ನಿನ್ನ ಸೇವಕರ ಬಲು ಬನ್ನ ಬಡಿಸಲು ಸಲ್ಲ

ಇನ್ನು ನೀ ಕರುಣಿಪುದು ವರದೇಶವಿಠಲ 5

***


No comments:

Post a Comment