by ಉರಗಾದ್ರಿವಾಸ ವಿಠ್ಠಲದಾಸರು
ರಾಗ :  ಮುಖಾರಿ   ತಾಳ : ಆದಿ 
ಭಕುತಿಯಾ ಬೇಡುವೇ
ಮುಕುತರೊಡೆಯ ನಿನ್ನ ಪದಪಂಕಜದೊಳು            ।।ಪ॥ 
ಬಾರಿಬಾರಿಗೆ ನಿನ್ನ ನಾಮವ
ಸಾರಿಸ್ಮರಿಸಲು ದಾರಿಯ ಕಾಣೆನೋ 
ಮಾರಮಣನೆ ದಯೆತೋರದಿರಲು ಇ 
ನ್ಯಾರಿಗೆ ಮೊರೆಯಿಡಲಯ್ಯಾ ಶ್ರೀ ಹರೇ                  ।।೧।।
ಘನ್ನದುರಿತಗಳಿಂದ ಹಿಂದೆ ನಾ
ಬನ್ನಪಟ್ಟು ಬಹು ಖಿನ್ನನಾಗಿಹೆ 
ಸನ್ನುತಾಂಗ ಶ್ರೀನಲ್ಲನೆ ನೀ 
ಇನ್ನು ಮನ್ನಿಸದಿರೆ ಇನ್ಯಾರಿಗೆ ಪೆಳಲೋ                 ।।೨।।
ಮಂಕುಮತಿಯಾಗಿದ್ದರೆನ್ನ ಹೃ
ತ್ಪಂಕಜದೊಲಗೆ ಅಕಳಂಕನಾಗಿಹೆ 
ಶಂಕೆ ಏಕೋ ನಿನ್ನ ಕಿಂಕರನಲ್ಲವೇ 
ಸಂಕಟ ಹರಿಸೋ ಶ್ರೀ ವೆಂಕಟೇಶನೆ                      ।।೩।।
********
ಭಕುತಿಯಾಬೇಡುವೆ ಪ
ಮುಕುತರೊಡೆಯ ನಿನ್ನಪದಪಂಕಜದೊಳು ಅ.ಪ
ಬಾರಿಬಾರಿಗೆ ನಿನ್ನ ನಾಮವ ನಾ|
ಸ್ಮರಿಸಲು ದಾರಿಯ ಕಾಣೆನೊ
ಮಾರಮಣನೆ ದಯತೋರದಿರಲು ಇ-
ನ್ಯಾರಿಗೆ ಮೊರೆಯಿಡಲಯ್ಯ ಶ್ರೀಹರೇ 1
ಘನ್ನದುರಿತಗಳಿಂದ ಹಿಂದೆ ನಾ
ಬನ್ನಪಟ್ಟು ಬಹು ಖಿನ್ನನಾಗಿಹೆ
ಸನ್ನುತಾಂಗ ಶ್ರೀನಲ್ಲನೆ ನೀ
ಇನ್ನುಮನ್ನಿಸದಿರೆ ಇನ್ನಾರಿಗೆ ಪೇಳಲೊ 2
ಮಂಕುಮತಿಯಾಗಿದ್ದರೆನ್ನ ಹೃ-
ತ್ಪಂಕಜದೊಳಗೆ ಅಕಳಂಕನಾಗಿಹೆ
ಶಂಕೆ ಏಕೋ ನಿನ್ನ ಕಿಂಕರನಲ್ಲವೇ
ಸಂಕಟ ಹರಿಸೋ ಶ್ರೀ ವೆಂಕಟೇಶನೆ 3
****
 
 
No comments:
Post a Comment