Thursday, 5 August 2021

ಬರುವುದೆಲ್ಲವು ಬಂದು ತೀರಿ ಹೋಗಲಿ ಹರಿ ankita ramadasa

 ರಾಮದಾಸರು

ಬರುವೆಲ್ಲವು ಬಂದೇ ತೀರಿ ಹೋಗಲಿ 

ಬರುವುದೆಲ್ಲವು ಬಂದು ತೀರಿ ಹೋಗಲಿ ಹರಿ ನಿನ್ನ ಸ್ಮರಣೆಯೆ ಸ್ಥಿರವಾಗಿರಲಿ ಪ


 ಕಳ್ಳನೆಂದು ಎನ್ನ ಮರಕೆ ಬಿಗಿಯಲಿ ಸುಳ್ಳನೆಂದು ಮೋರೆ ಮೇಲೆ ಉಗುಳಲಿ ತಳ್ಳಿಕೋರನೆಂದು ಎಳದಾಡಿ ಒದಿಲಿ ಎಲ್ಲಿನೋಡಿದಲ್ಲಿ ಹಾಸ್ಯಮಾಡಲಿ 1


 ಡಂಭಕನಿವನೆಂದು ಬಿಡದೆ ನಿಂದಿಸಲಿ ನಂಬದೆ ಜನರೆನಗೆ ಇಂಬುಗೊಡದಿರಲಿ ಕುಂಭಿನಿಪರು ಎನ್ನ ಮುನಿದು ನೋಡಲಿ ಇಂಬು ಸಿಗದೆ ನಾನು ತೊಳಲಿ ಬಳಲಲಿ 2 


ಸತಿಸುತರೆನ್ನನು ಬಿಟ್ಟು ಹೋಗಲಿ ಕ್ಷಿತಿಯೊಳೆನ್ನನು ಯಾರು ಸೇರದಂತಿರಲಿ ಪತಿತಪಾವನ ಸಿರಿಪತಿ ಶ್ರೀರಾಮನ ಪೂರ್ಣ ಹಿತವೊಂದೆ ಎನ್ನ ಮೇಲೆ ಬಿಡದಂತಿರಲಿ 3

***


baruvudellavu baMdE tIri hOgali

hari ninna smaraNeye sthiravAgirali /pa/


kaLLaneMdu enna marake bigiyali

suLLaneMdu mOre mEle uguLali

taLLikOraneMdu eLadADi odili

elli nODidalli hAsyamADali /1/


DaMbhakanivaneMdu biDade niMdisali

naMbade janarenage iMbugoDadirali

kuMbhiniparu enna munidu nODali

iMbu sigade nAnu toLali baLalali /2/


satisutarennaru biTTu tolagali

kShitiyoLennanu yAru sEradaMtirali

patitapAvana siripati shrIrAmana pUrNa

hitavoMde enna mEle biDadaMtirali /3/

***


No comments:

Post a Comment