..
ವಾರಿಜ ಮುಖಿ ವಾರಿಜಾಕ್ಷಿ ವಾರಿಜ ಗಂಧಿ ವಾರಿಸನಳಿಯನನುಓರಂತೆ ನೀ ಪೋಗಿ ಕರೆತಾರೆನ್ನಯ ಪ್ರಾಣಾಧಾರ ಕೇಶವ ಮೂರ್ತಿಯ ಪ
ನಗ ವೈರಿಯಣುಗನಣ್ಣನಯ್ಯನಾಪ್ತಗೆ ಮಿಗೆ ಹುಟ್ಟಿದನ ತಮ್ಮನಸೊಗಸು ವಸ್ತ್ರಕೆ ಸೋತನ ಸುರಪುತ್ರನ ವಾಜಿಯನಿವ ವೈರಿಯ ಪಗೆಯಜಗದೊಳಗೆ ಹಾಟಿದೊಳೇರಾಟದ ವನವ... ನವನಿಂದ ನಗೆತೋರಿನಾವುನಿನಗೆಅಗಣಿತಾಭರಣವೀವೆನು ಅಂಗಜಾಗ್ನಿಯ ತಗಹ ಬಿಡಿಸೆ ತರುಣಿ 1
ಮಿಹಿರ ನಂದನನ ತಂದೆಯ ಪಗೆಯವನ ಮಾವನ ಹಿತನ ಮನೆವೆಸರಮಹಿ ವನ ಕೃತಿಗೊಡೆಯನ ಬಂಟನನುಜನ ಸಹಿಸಿ ತಮ್ಮನ ಮಿತ್ರನ ಕುಹಕದಿ ಶಾಪವಡೆದಳು ಪ್ರಸ್ತರವಾಗಿ ಗಗನ ಮಧ್ಯದೊಳಿರಲು...ಸಿ ಶಾಪವ ದನುಜ... ಕ್ಷಿತಿಯೊಳು ವಿವರಿಸುವವನ ಕರೆತಾರೆ 2
ಸುರಭೇದ ಪ್ರಥಮ ದಾಸಿಯ ಪೆಸರನ ವಾಜಿಯರಸನ ನಖವೈರಿಯಮರೆಯ ಮಾರ್ಗದಿ ಗಮಿಸುವನಾಪ್ತನ ತಾಯ ಧರಿಸಿದಾತನ ಮಿತ್ರನಪೊರೆಯ ದೆಸೆಯ ದಿಕ್ಕರಿಯ ಕೋಪದಿ ಸೀಳ್ದನರಸಿಯಣ್ಣನನೀಕ್ಷಣಕರೆತಂದೆನಗೆ ಕೂಡಿಸು ಕಾಗಿನೆಲೆಯಾದಿಕೇಶವನ 3
***
No comments:
Post a Comment