Wednesday, 1 September 2021

ಮನವೆ ಶ್ರೀಗುರು ಪಾದವ ನಂಬು ನಿನಗಲ್ಯಾಹುದು ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಮನವೆ ಶ್ರೀಗುರು ಪಾದವ ನಂಬು ನಿನಗಲ್ಯಾಹುದು ಘನ ಸುಖದಿಂಬು 1 

ಅನುದಿನ ನೋಡಾ ನಂಬದೆ ನಿಜವನು ನೀ ಕೆಡಬ್ಯಾಡ 2 

ಬ್ಯಾಡೆಂಬುದು ಈ ಮಾತನೆ ಕೇಳು ಬೇಡದೆ ಬಯಸದೆ ನಿಜದಲಿ ಬಾಳು 3 

ಬಾಳುವದೀಪರಿ ಜನದಲಿ ಲೇಸು ತಿಳಿಯದೆ ಬಯಸುವದ್ಯಾತಕೆ ಸೋಸು 4 

ಸೋಸ್ಹಿಡಿದರ ಬೇಕಾಹುದು ಜನ್ಮ ಕರ್ಮ 5 

ಭವ ಬಂಧ ಮರ್ಮವ ತಿಳಿಯದವನೆ ತಾ ಅಂಧ 6 

ಅಂಧಗ ತಿಳಿಯದು ಆತ್ಮದ ಗೂಢ ಸಂಧಿಸಿ ಬೀಳಲು ವಿಷದಲಿ ಮೂಢ 7 

ಮೂಢಗೆಲ್ಲಿಹ್ಯ ಆತ್ಮದ ವಿಚಾರ ನೋಡುವ ನೋಟವು ಇದು ಬಲುದೂರ 8 

ದೂರಕೇ ನೀ ದೂರಾಗಿಬ್ಯಾಡ ಅರಿಯಲು ತನ್ನೊಳು ಸಾರವೆ ನೋಡಾ 9 

ನೋಡುವುದಿದು ಗುರುಙÁ್ಞನದ ಗುಟ್ಟು ಆಡಿದ ಅನುಭವ ಮಾತಿಗೆ ಮುಟ್ಟು 10 

ಮುಟ್ಟಿದ ಖೂನವು ಮಿಸುಕಲಿ ಬ್ಯಾಡ ಘಟ್ಯಾಗಿ ನಿಜಘನ ಬೆರೆ ಗಾಢಾ 11 

ಗಾಢಾಗಿಹುದು ನಿಜಗುರು ಜ್ಞಾನ ಮಾಡುವ ಧ್ಯಾನಕೆ ಅನುಸಂಧಾನ 12 

ಉನ್ಮನದಲಿ ತಿಳಿವುದು ಗುರುಮುಖ 13 

ಗುರು ಮುಖದಲಿ ಬೆಳಗಾಹುದು ಪೂರ್ಣ ಬೀರುವ ಪ್ರಭೆ ಸದ್ಗುರು ಕರುಣ 14 

ಕರುಣದ ಸಾಗರ ಗುರುವರ ಮೂರ್ತಿ ಇರುಳ್ಹಗಲೆ ಕೊಂಡಾಡುವೆ ಕೀರ್ತಿ 15 

ಕೀರ್ತಿಯ ಕೊಂಡಾಡುವನೀ ಮಹಿಪತಿ ಸಾರ್ಥಕವಿದು ಅನುಭವ ಮನೆಮೂರ್ತಿ 16

***


No comments:

Post a Comment