Wednesday, 1 September 2021

ಕಂಡೆವು ಗುರುದಿವ್ಯ ಶ್ರೀ ಸುಚರಣ ಮಂಡಲದೊಳಾಯಿತು ಸುಭೂಷಣ ankita mahipati

 ಕಾಖಂಡಕಿ ಶ್ರೀ ಮಹಿಪತಿರಾಯರು

ಕಂಡೆವು ಗುರುದಿವ್ಯ ಶ್ರೀ ಸುಚರಣ ಮಂಡಲದೊಳಾಯಿತು ಸುಭೂಷಣ ಪ 


ಇದೆ ನಿಜ ಪುಣ್ಯ ಪೂರ್ವಾರ್ಜಿತ ಇದರಿಟ್ಟು ಬಂತೆನಗಾಯಿತು ಒದಗಿ ಕೈಗೂಡಿತು ತ್ವರಿತ ಹೃದಯಲೆನ್ನಾಯಿತು ಉದಿತ 1 

ಕಣ್ಣಾರೆ ಕಂಡೆವು ನಿಜ ಧನ ಜನುಮವೆನ್ನಾಯಿತು ಪಾವನ ಎನ್ನೊಳು ದೋರಿತಾನಂದ ಘನ ಧನ್ಯ ಧನ್ಯವಾಯಿತು ಜೀವನ 2 

ಲೇಸು ಲೇಸಾಯಿತಯ್ಯ ನೋಡಿ ಭಾವಿಸಿದ ಸದ್ಗುರು ದಯಮಾಡಿ ವಾಸನೆ ಪೂರಿಸಿತು ಇಲ್ಲೆ ನೋಡಿ ದಾಸಮಹಿಪತಿ ನಿಜಗೂಡಿ 3

***


No comments:

Post a Comment