Monday, 2 August 2021

ತಂಗಿ ಹೇಳೆ ಚೆಲುವ ಕೃಷ್ಣನು ದೊಡ್ಡವನೇನೆ ankita krishnavittala

ತಂಗಿ ಹೇಳೆ ಚೆಲುವ ಕೃಷ್ಣನು ದೊಡ್ಡವನೇನೆ

ಬಲುದೊಡ್ಡವನೇನೆ ಪ


ರಂಗನ ಪೊಗಳುವ ಹೆಡ್ಡರÀÀ ಮಾತನು ಕೇಳುವರೇನೆ

ಅಕ್ಕಕÉೀಳುವರೇನೆ ಅ.ಪ


ಹಿರಿದಾಗಿ ಕೃಷ್ಣನು ವೇದವ ತಂದು ಸರಸಿಜೋದ್ಭವಗಿತ್ತನೆ

ಕೃಷ್ಣಸರಸಿಜೋದ್ಭವಗಿತ್ತನೆ

ನೀರೊಳಗಿರುವ ಮೀನಾಗೋದು ಗಾರುಡಿವಿದ್ಯವೆ ಇದು

ಗಾರುಡಿವಿದ್ಯವೆ 1


ಶೃಂಗಾರಲೋಲನು ಹಿಂಗದ ಅಮೃತವ ಸುರರಿಗೆ ಹಂಚಿದನೆ

ಕೃಷ್ಣಸುರರಿಗೆ ಹಂಚಿಚನೆ

ಅಂಗನೆಯಾಗಿ ಹೀಂಗೆ ಮಾಡೋದು ವಂಚನೆಯಲ್ಲವೆ

ಇದು ವಂಚನೆಯಲ್ಲವೆ 2

ಸಂದರಾಂಗನು ವರಹನಾಗುತ ಭೂಮಿಯನೆತ್ತಿದನೆ ಕೃಷ್ಣ

ಭೂಮಿಯನೆತ್ತಿದನೆ

ಹಂದಿಯವೇಷದಿ ದಿತಿಜನ ಕೊಂದೂದು ಮೋಸದವಿದ್ಯವೆ

ಇದುಮೋಸದ ವಿದ್ಯವೆ 3

ಪರಿಪರಿವ್ಯಾಪ್ತಿಯ ತೋರುತ ಕೃಷ್ಣನುನರಹರಿ ಆದನೆ

ಕೃಷ್ಣನು ನರಹರಿ ಆದನೆ

ಪೋರನ ಮಾತಿಗೆ ಕರುಳನು ಬಗೆದುದು ಘೋರಕೃತ್ಯವೆ

ಇದು ಘೋರಕೃತ್ಯವೆ 4

ಘನವಾಮನ ಆಗುತ ಕೃಷ್ಣನು ಇಂದ್ರನ ಸಲಹಿದನೆ

ಕೃಷ್ಣ ಇಂದ್ರನ ಸಲಹಿದನೆ

ಅಣ್ಣನ ಸಲಹಲು ತಮ್ಮನ ತುಳಿದುದು ಯಾತರ ನ್ಯಾಯವೆ

ಇದು ಯಾತರೆ ನ್ಯಾಯವೆ 5

ಪೊತ್ತು ಕೊಡಲಿಯ ತಿರುಗುತಕೃಷ್ಣನು ಭೂಪರ ತರಿದನೆ

ಕೃಷ್ಣ ಭೂಪರ ತರಿದನೆ

ಹೆತ್ತತಾಯಿಯ ಕಡಿಯುವ ಮಗನು ಘಾತುಕನಲ್ಲವೆ

ಅವನು ಘಾತುಕನಲ್ಲವೆ 6

ಶ್ರೀಪತಿ ಆದರು ಪಿತನ ಮಾತಿಗೆ ಆಡವಿಯೊಳ್ ಚರಿಸಿದನೆ

ಕೃಷ್ಣ ಅಡವಿಯೊಳ್ ಚರಿಸಿದನೆ

ಕಪಿಗಳಕೂಡೆ ಓಡಾಡುವುದು ಒಡೆಯರ ಲಕ್ಷಣವೆ ಇದು

ಒಡೆಂiÀiರ ಲಕ್ಷಣವೆ 7

ಗೋಪತಿ ಕೃಷ್ಣನು ಪ್ರೀತಿಗೆ ಒಲಿಯುತ ಗೋಪೆರ ಕೂಡಿದನೆ

ಕೃಷ್ಣಗೋಪೆರ ಕೂಡಿದನೆ

ಶ್ರೀಪತಿಯಾಗಿ ಅನ್ಯರ ಬೆರೆದುದು ಪಾಪವಲ್ಲವೆ ಇದು

ಪಾಪವಲ್ಲವೆ 8

ಉತ್ತುಮ ಬುದ್ಧನು ಆಗುತ ಕೃಷ್ಣನು ದೈತ್ಯರ ನಳಿಸಿದನೆ

ಕೃಷ್ಣ ದೈತ್ಯರ ನಳಿಸಿದನೆ

ಬೆತ್ತಲೆ ನಿಂತು ಸ್ತ್ರೀಯರಕೆಡಿಸುವ ಭಂಡನಲ್ಲವೇ ಇವನು

ಭಂಡನಲ್ಲವೇ 9

ಚೆಲುವ ರಾಹುತನಾಗಿ ಕೃಷ್ಣ ಧರ್ಮವ ನುಳುಹುವನೆ

ಕೃಷ್ಣ ಧರ್ಮವನುಳುಹುವನೆ

ಒಳ್ಳೆಯ ಮಾತಿಲಿ ಸುಳ್ಳನು ಹೇಳಿದೆ ಕೋಪ ಬೇಡವೆ

ಅಕ್ಕ ಕೋಪ ಬೇಡವೇ 10

ಜೀಯ ಜಯಮುನಿ ವಾಯುವಿನಂತರ ಶ್ರೀ

ಕೃಷ್ಣವಿಠಲನೆ ಅವನು ಶ್ರೀ ಕೃಷ್ಣವಿಠಲನೆ ಅತನು

ಶ್ರೀಕೃಷ್ಣವಿಠಲನು ಅವನಾದರೆ ಜೀಯನೆ ಅವನೆಮಗೆ

ಅಕ್ಕ ಜೀಯನೆ ಅವನೆಮಗೆ11

****


No comments:

Post a Comment