ಶ್ರೀಪಾದರಾಜ ಪಾಲಿಸೊ ಕೈಪಿಡಿದೀ ಭವದ
ಕೂಪಾರದಿಂದ ದಾಟಿಸೋ ಪ
ಕಾಪಾಡೆಲೊ ಕರುಣಾ ಪಯೋನಿಧೆ ಭೂಪಚಂದ್ರ ಗಿರಿ
ಪಾಪಗಳನ್ನು ಕಳದಿರುವೆ ಮದ್ಗುರುವೆ ಕರಮುಗಿವೆ
ಭಜಕರ ಸುರತರುವೇ ಅ.ಪ
ಮೇದಿನಿ ಪಾಲಪೂಜಿತ ವಿದ್ವಜ್ಜನವಿನುತ
ಮೇದಿನಿ ಜಾತ ಪ್ರದಾತ
ಮೋದಮುನಿಯ ಸುಮತೋದಧಿಚಂದಿರ
ವಾದಿ ಮದಗಜ ಮೃಗಾಧಿಪ ಕವಿಜನಗೇಯ ಶುಭ
ಕಾಯ ಧೃವರಾಯ ಆಶ್ವರ್ಯ ಚರ್ಯ1
ವಿಪ್ರಹತ್ಯಾದಿ ದೋಷಗಳನ್ನು ಕಳೆಯುವ ಮಹಿಮೆಯನು
ಅಪ್ರಬುದ್ಧರು ದೂಷಿಸೆನಿಮ್ಮನ್ನು
ಕ್ಷಿಪ್ರ ಶಂಖೋದಕ ಸಂಪ್ರೋಕ್ಷಿಸಿ ಬಲು ಕಪ್ಪುವಸನವನು
ಸುಪ್ರಕಾಶಿಸಿದ ಮಹಿಮಾ ಶುಭನಾಮ ಜಿತಕಾಮಾ
ಯತೆ ಸಾರ್ವಭೌಮ 2
ಕ್ಷೇತ್ರ ಕಾರ್ಪರದಲಿ ಶ್ರೀ ರಘುನಾಥ
ವಿಭುದೇಂದ್ರ ಸಹಿತ
ಛಾತ್ರಾ ನಿಮ್ಮನ್ನು ಕೇಳಲು ಸೂ-
ತ್ರಾರ್ಥಾ ಚಾತುರ್ಮಾಸದಿ ಕೂತಿರೆತವ
ಸರ್ವಾತಿಶಯದಿಸ-
ಚ್ಛಾಸ್ತ್ರ ಪ್ರವಚನ ಸುಪ್ರೀತಾ ರಘುನಾಥಾ
ಮುಖಗೀತಾನಾಮದಿ ಪ್ರಖ್ಯಾತ 3
ಎಷ್ಟು ನಿಮ್ಮಂಘ್ರಿಸ್ಮರಣೆಯ ಮಾಡುವರಿಗೆ ನಿತ್ಯಾ
ಮೃಷ್ಟಾನ್ನ ಕೊಡುವೊ ಮಹಿಮೆಯ ಕೃಷ್ಣಗರ್ಪಿಸಿದ
ಪಷ್ಠಿಶಾಕಯುತ ಮೃಷ್ಟಾನ್ನ ದ್ವಿಜ
ತುಷ್ಟಿಗೈಸುವಿರಿ ನಿರುತ ಗುಣಭರಿತ ಪ್ರಖ್ಯಾತ
ಪಾವನ ತರ ಚರಿತ 4
ನಿರುತ ನಿಮ್ಮನ್ನು ಸ್ಮರಿಸುವ ನರಧನ್ಯ
ಜಗದೊಳು ಸನ್ಮಾನ್ಯ
ಚರಿಸಿ ಸತ್ಕರ್ಮವ ಘಳಿಸುವ ಪುಣ್ಯ
ಶರಣುಜನಕೆ ಸುರತರುವೆಂದೆನಿಸುತ ಧರೆಯೊಳು
ಮೆರೆಯುವ ಶಿರಿಕಾರ್ಪರ ಶುಭನಿಲಯ ಸುರಗೇಯ
ಗುರುರಾಯ ನರಹರಿಗತಿ ಪ್ರೀಯ 5
*****
No comments:
Post a Comment