Wednesday, 1 September 2021

ಇವರೆವೆ ಧನ್ಯರಲ್ಲವೆ ಈ ಶರಣರು ಈ ಶರಣರು ಇವರೆವೆ ankita gurumahipati

 ಕಾಖಂಡಕಿ ಶ್ರೀ ಕೃಷ್ಣದಾಸರು

ಇವರೆವೆ ಧನ್ಯರಲ್ಲವೆ ಈ ಶರಣರು | ಈ ಶರಣರು | ಇವರೆವೆ ಧನ್ಯರಲ್ಲವೆ ಅವನಿಲಿ ಶರಣರು ಪ 

ಕರುಣಾನಂದವ ಪಡೆದು | ತರಣೋಪಾಯವನರಿದು | ಜರಿವನ್ಯ ಹಂಬಲವ ಬೆರೆದು | ಭಕ್ತಿರಸದೊಳು | ನಿರಪೇಕ್ಷ ವೃತ್ತಿಯಿಂದಾ | ಚರರಿಸುತಿಹ ಶರಣರು 1 
ಭವ ಕಾನನವನೆ ತೊರೆವಾ | ನಿತ್ಯ ತಾನಾರೆಂಬುದು ನರಿವಾ | ಸ್ವಾನಂದಬೋಧವನು ಮಾನ | ನೀಗಿ ಶ್ರವಣದಿ | ಸಾನುರಾಗದಲಿಂದ ತಾನುಂಬ ಶರಣರು 2 
ಹರಿಯಲ್ಲರೊಳಗರಿದು | ಶರೀರ ಭಾವನೆ ಮರೆದು | ಹರುಷದ ಗುಡಿಗಟ್ಟಿಬರುವ | ನಯನೋದಕದಿ | ಗುರುಮಹಿಪತಿಸ್ವಾಮಿ ಚರಣದ ಶರಣರು 3
***

No comments:

Post a Comment