..
ರಾಗ :ಕಲ್ಯಾಣಿ
ಅಸುರರ ಜನ್ಮದಿ ಪುಟ್ಟಿದ ಇವರಿಗೆ
ಶ್ವಸನನ ಆವೇಶ ಸುರರಾವೇಶ ಬಲದಿ
ಅಸಮಜ್ಞಾನ ಭಕುತಿ ವಿರಾಗವು
ವಸುಧಿಯ ತಳದಿ ದಿನದಿನದಲ್ಲಿ
ಪಸರಿಪ ಸೂರ್ಯನ ಪ್ರಭೆಯಂದದಲಿ
ಮಿಸುಪದಕಿದೇ ಕಾರಣ ಉಂಟು
ಬಿಸಜಾಂಬಕ ಹರಿಪೇಳಿದ ಇವರಿಗೆ
ಅಸುರೇಶ ಹಿರಣ್ಯಕಶಿಪುವಿನಲ್ಲಿ
ಶಿಶುಭಾವದಿಂದ ಜನಿಸಲು ಪೋಗಿರಿ
ಪುಸಿಯಲ್ಲ ಮಚ್ಛಾಪÀ
ಅಸುರಭಾವ ಪ್ರಲ್ಹಾದಾದ್ಯ
ರಸಮಮಹಿಮರಾಗೀ ಜನಿಸಿರೆಂದು
ಉಸುರಿದ ವಾಕ್ಯವು ಪ್ರಮಾಣ ಸಿದ್ಧವೆನ್ನಿ
ವ್ಯಸನzಲೈವರು ಹರಿಯನೆ ಮತ್ತೆ
ಬೆಸಗೊಂಡರೀಪರಿ ಪರಿಯಾ
ಅಸುರನ ಪತ್ನಿಯ ಬಸಿರೊಳು ಪುಟ್ಟುವುದು
ವಶವಲ್ಲವೋ ಸ್ವಾಮಿ
ಕುಸುಮನಾಭನೆ ನಿನ್ನ
ಅಸಮಲೋಕದ ಸುಖ ವಸುಧಿತಳಾದಲ್ಲಿ
ಎಸಗದು ಎಸಗದು ಎಂದಿನಕಾಲಕ್ಕೂ
ಮುಸುಕುವದಜ್ಞಾನ ದುಃಖದ ಭವದಲ್ಲಿ
ಕಸವಿಸಿಗೊಳುತಾ ಜ್ಞಾನವನೀಗಿ
ಬಿಸನಿಲಯನೆ ನಿನ್ನ ದರುಶನವಿಲ್ಲದೆ
ಅಸುನಿಲ್ಲುವ ಬಗೆ ಯಾವುದು ಪೇಳೋ
ಶಶಿಧರವಂದ್ಯ ಗುರುಜಗನ್ನಾಥ ವಿಠಲ ನಮ್ಮ
ವ್ಯಸನವನು ಕಳೆದು ಸುಖವನು ಸಲಿಸೋ
ರಾಗ - ಕಾಂಭೋದಿ ತಾಳ - ತ್ರಿವಿಡಿ
ಭಕುತವಾಕ್ಯವ ಲಾಲಿಸಿ ತಾನಾಗ
ಲಕುಮಿರಮಣನು ಈ ಪರಿ ನುಡಿದನು
ವಿಕಳ ಪೊಂದದೆ ನೀವು ತ್ವರಿತಾದಿ ಧರೆಯೊಳು
ಸಕಲರು ಜನಿಸಲು ಮುಸಕದಜ್ಞಾನ
ಲಕುಮಿ ಭೂಮಿಯ ಸಹಿತ ಇರುವೆನು ನಿಮ್ಮೊಳು
ವ್ಯಕುತನೆನಿಸಿ ನಿತ್ಯ ಪರಿಪರಿ ಮಹಿಮವ
ಪ್ರಕಟಮಾಡುವೆ ಮುಖ್ಯಪ್ರಾಣನಿಪ್ಪನು ಸತತ
ಕಕುಲಾತಿ ಯಾಕಿನ್ನು ನಡಿರೆಂದು ಹರಿಯೆಂದ
ಉಕುತ ವಾಕ್ಯದಲಿಂದ ದಿತಿಜನಲ್ಲಿ
ಸುಕೃತಿಗಳೈವರು ಉದಯವೈದಿದರಾಗ
ಮುಕುತಿದಾಯಕ ಗುರುಜಗನ್ನಾಥ ವಿಠಲನೆಂಬ
ಭಕುತಿ ಪೂರ್ವಕ ಜ್ಞಾನವೃದ್ಧಿಯೈದಿದರು
ರಾಗ - ಆರಭಿ ತಾಳ - ಅಟ್ಟ
ಪಿರಿಯ ಪ್ರಲ್ಹಾದನ್ನ - ಕರದು ತೊಡೆಯ ಮೇಲೆ
ಇರಿಸಿ ಪ್ರೇಮದಿ ನಿಮ್ಮ - ಗುರುವೇನು ಪೇಳ್ಯಾನೆ
ಮರಿಯಾದೆ ಎನಮುಂದೆ - ಅರಹು ಎನಲು ಬಾಲ
ಕಿರಿನಗೆ ಮುಖದಿಂದ - ಹರಿಯೆ ಸರ್ವೋತ್ತಮ
ಹರಬೊಮ್ಮ ಮುಖರೆಲ್ಲ - ಪರಿವಾರಭೂತರು
ಅರಿದಿಪ್ಪೆ ಎನ್ನಯ್ಯ ಸರಸಿಜಜಾಂಡಕ್ಕೆ
ಅರಸು ತಾನಾಗಿದ್ದು ಇರುವಾದಿ ಚೇತನ
ತರುವಾದಿ ಜಡಮಯ ಸರ್ವಸ್ಥಳದಲ್ಲಿ
ನಿರುತದಿ ವ್ಯಾಪಿಸಿ ಇರುತಿಹ ಹರಿ ಎಂದು
ಅರಿತ ಮಾನವÀÀನಿಗೆ ದೊರೆವೋನು ನಿಶ್ಚಯ
ಅರಿತು ಪೇಳಿದ ತನ್ನ ತರಳಾನ ನುಡಿಕೇಳಿ
ಭರದಿಂದ ಕಂಬವ ಕರದಿಂದ ಬಡಿಯಾಲು
ನರಮೃಗಾಕಾರದಿ ಹೊರಗೆ ಬಂದಾದೈತ್ಯನು
ದರವ ಬಗೆದು ಕರುಳಮಾಲೆಯತಾ
ಕೊರಳೊಳು ಧರಿಸಿದ ಚರಜನ ಪರಿಪಾಲ
ಬಿರುದು ಬೀರಿದ ನಮ್ಮ ಗುರುಜಗನ್ನಾಥವಿಠಲ
ಶರಣರ ಮರೆಯನೋ ಧರಿತಳದೊಳಗೆ
ರಾಗ :ಇಚ್ಛಾ :ತಾಳ - ಆದಿ
ಈ ತೆರ ಪ್ರಹ್ಹಾದ ಹರಿಪಾದವ ಭಜಿಸಿ
ಪ್ರೀತಿಯ ಪಡೆದು ಭೂಸುರಗಣಕೆ
ಭೂತಳದೊಳಗೆ ಯತಿಗಳ ಕುಲಕೆ
ನಾಥನು ವ್ಯಾಸಮುನಿ ಎನಿಸಿ ಮರಳಿ
ಖ್ಯಾತ ಶ್ರೀ ರಾಘವೇಂದ್ರನೆಂದೆನಿಸಿ
ಪ್ರೀತಿಯಿಂದಲಿ ಭಕ್ತರ ಪೊರೆಯಲು
ನೀತಿ ಭಾವದಲಿ ಯತಿಯಾಶ್ರಮ ಪೊಂದಿ
ಸೀತಾಪತಿರಾಮ ಯದುನಾಯಕ ಕೃಷ್ಣ
ಭೀತಿಹರ ನರಸಿಂಹ ವ್ಯಾಸರ ಭಜಿಸಿ
ದೂತರ ಮನೋರಥ ಪೂರ್ತಿಸಿ ಪೊರೆವನು
ದಾತಗುರುಜಗನ್ನಾಥ ವಿಠಲನ್ನ
ನೀತ ವಿಭೂತಿಯ ಪಡೆದು ನಿರ್ಭೀತನಾಗಿಹನು
ಜತೆ
ದೂತಜನರ ಮಹಾಪಾತಕ ಹರನೆನ್ನಿ
ಪ್ರೀತಗುರುಜಗನ್ನಾಥವಿಠಲನೊಲಿವ
ರಾಗ :ಶಂಕರಾಭರಣ :ತಾಳ :ಏಕ
***
No comments:
Post a Comment