ಶರಣುಹೊಕ್ಕೆನು ಕರುಣಾಂಬುಧಿಯೇ ಕಾಯೊ ಪ
ಸುರಪುರ ನಿಲಯ ಲಕ್ಷ್ಮೀಪತಿಯೇ ಅ.ಪ
ಪುಂಡುದಾನವರ ಶಿರವನೆ ಛೇದಿಸಿ ಮುಂ
ಕೊಂಡಸುರ ದಶಾನನನಾ
ದಿಂಡುದರಿದು ರಕ್ಕಸರ ಸಂಹರಿಸಿ
ಖಂಡ ವಿಭೀಷಣಗುದ್ದಂಡಪದವಿಯ ಇತ್ತನೆಂದು 1
ಸುರಪನ ವರ ತನುಜನ ರಥದೊಳು ನಿಂದು
ಕರುಣದಿಂದಲೆ ತುರಗವ ಪೊಡೆಯೆ
ಕುರುಕುಲ ಚತುರ್ಬಲವ ಸಂಹರಿಸಿಯೆ
ಉರಗಶರವು ಬರೆ ನರನ ಕಾಯ್ದನೆಂದು 2
ನರಮೃಗರೂಪಿನಲಿ ಹಿರಣ್ಯಕಶಿಪುವಿನ
ಉರವ ಬಗೆದು ಶರಣನ ಪೊರೆಯೆ
ಸುರಪುರವಾಸನೆ ಶ್ರೀಲಕ್ಷ್ಮೀ ಅರಸನೆ
ದುರುಳ ನೆಗಳ ಕೊಂದು ಕರಿಯ ಕಾಯ್ದನೆಂದು 3
***
No comments:
Post a Comment