Saturday, 1 May 2021

ದ್ವಿರದ ವಾದನ ಪಾಹಿ ವಿಘ್ನ ವಿದೂರ ankita shyamasundara

ರಾಗ : ದೇಶ್     ತಾಳ : ದಾದರ 


ದ್ವಿರದ ವಾದನ ಪಾಹಿ -

ವಿಘ್ನ ವಿದೂರ ।

ನಭೇಶ ಕೃಪಾಬ್ಧಿ  

ಗೌರಿ ಸುಕುಮಾರ ।। ಪಲ್ಲವಿ ।।


ಸಿದ್ಧಿ ವಿನಾಯಕ ।

ವಿದ್ಯಾ ಪ್ರದಾಯಕ ।

ಉದ್ಧರಿಸೈ -

ಸುಜನೋಪಕಾರಿ ।। ಚರಣ ।।


ಉಂದುರ ವಾಹನ ।

ಬಂಧ ವಿಮೋಚಕ ।

ಚಂದಿರ ಶಾಪದ -

ಮಾರವಿದಾರ ।। ಚರಣ ।।  

     

ಶ್ಯಾಮಸುಂದರ -

ಸ್ವಾಮಿಯ ನಾಮ ।

ಪ್ರೇಮದಿ ಜಿಹ್ವೆಗೆ -

ಕರುಣಿ ಸುದಾರ ।। ಚರಣ ।

***


ವಿವರಣೆ-ಆಚಾರ್ಯ ನಾಗರಾಜು ಹಾವೇರಿ,ಗುರು ವಿಜಯ ಪ್ರತಿಷ್ಠಾನ

ಉಂದುರ = ಇಲಿ 

ಉಂದುರ ವಾಹನ = ಶ್ರೀ ಗಣಪತಿ

***


No comments:

Post a Comment