ರಂಗ ಬಂದ ನೋಡಿ..
ಶ್ರೀರಂಗ ಬಂದ ನೋಡಿ ॥
ಮಂಗಳಾಂಗ ಹರಿ ಚೆಂದದಿ ಬಂದ 
ಸಿಂಗಾರಗೊಂಡ  ಶ್ರೀನಿವಾಸ (ನರಸಿಂಗ)ಬಂದನು ॥ಅ|ಪ॥
ರಾಮ ಬಂದ ನೋಡೀ 
ರಘುರಾಮ  ಬಂದ ನೋಡಿ 
ಶ್ಯಾಮವರ್ಣದ ಸುಶೇಣನು ಬಂದ 
ಬಂದ ಬಂದ ಭಕ್ತರಾನಂದ ನೋಡಿ॥
ಉಡುಪಿಯ ಬಾಲ ಬಂದ ನೋಡಿ 
ಕಡಗೋಲು  ಕೃಷ್ಣ  ಬಂದ  ನೋಡಿ
ಶಕಟ ಪೂತನಿಯ ಸಂಹರಿಸಿದ 
ವಿಕಟ ತುಂಟ  ಹರಿ ಬಂದ ಬಂದ ನೋಡಿ ॥2॥
ವಿಠಲ ಬಂದ ನೋಡಿ 
ಪಂಢರಪುರ ವಿಠಲ ಬಂದ ನೋಡಿ
"ಅಜನಪಿತ ವಿಠಲ "ನಲಿಯುತ ಬಂದ
ಹರಿದಾಸರ ದಾಸರ  ಆನಂದ ನೋಡಿ॥3॥
ರಚನೆ:ಅಜನಪಿತ ವಿಠಲದಾಸ 
          (ಕೃಷ್ಣ ಹುನಗುಂದ)
*****
 
 
No comments:
Post a Comment