ರಾಗ ಶಂಕರಾಭರಣ ಆದಿ ತಾಳ
ಆರಿಗೆ ಮೊರೆಯಿಡಲೊ ಹರಿಯೆ ವಿ-
ಚಾರಿಸುವರ ಒಬ್ಬರ ಕಾಣೆ ||ಪ||
ಹಲವಂಗ ಗುಣದವನೊಬ್ಬರಸು
ತಲೆಯಿಲ್ಲದವನೊಬ್ಬ ಪ್ರಧಾನಿ
ತಳವಾರ ಕಿಡಿಗಣ್ಣಿನವನೊಬ್ಬ
ಬಲುಬೊಟ್ಟು ಗುಣದೊಬ್ಬ ಶ್ಯಾನಭೋಗ
ಅರಸನ ಹೆಂಡತಿ ರತಿಗಾರಿ
ಅರಸನ ಮಗಳು ಅಹಂಕಾರಿ
ಅರಸನ ಸೊಸೆಯೊಬ್ಬ ಅನ್ಯಾಕಾರಿ
ಅರಸನ ದಾಸಿಯು ಅತಿ ಕ್ರೂರಿ
ನಡುನಡುವೆ ಯಮನ ಪಟ್ಟಣವು ಎ-
ನ್ನೊಡೆಯ ಪಂಚೇಂದ್ರಿಯ ದೈವಕರು
ತಡೆಯದಂತೆ ನೀ ದಯಮಾಡೋ ಎ-
ನ್ನೊಡೆಯ ಪುರಂದರ ವಿಠಲನೆ
***
ಆರಿಗೆ ಮೊರೆಯಿಡಲೊ ಹರಿಯೆ ವಿ-
ಚಾರಿಸುವರ ಒಬ್ಬರ ಕಾಣೆ ||ಪ||
ಹಲವಂಗ ಗುಣದವನೊಬ್ಬರಸು
ತಲೆಯಿಲ್ಲದವನೊಬ್ಬ ಪ್ರಧಾನಿ
ತಳವಾರ ಕಿಡಿಗಣ್ಣಿನವನೊಬ್ಬ
ಬಲುಬೊಟ್ಟು ಗುಣದೊಬ್ಬ ಶ್ಯಾನಭೋಗ
ಅರಸನ ಹೆಂಡತಿ ರತಿಗಾರಿ
ಅರಸನ ಮಗಳು ಅಹಂಕಾರಿ
ಅರಸನ ಸೊಸೆಯೊಬ್ಬ ಅನ್ಯಾಕಾರಿ
ಅರಸನ ದಾಸಿಯು ಅತಿ ಕ್ರೂರಿ
ನಡುನಡುವೆ ಯಮನ ಪಟ್ಟಣವು ಎ-
ನ್ನೊಡೆಯ ಪಂಚೇಂದ್ರಿಯ ದೈವಕರು
ತಡೆಯದಂತೆ ನೀ ದಯಮಾಡೋ ಎ-
ನ್ನೊಡೆಯ ಪುರಂದರ ವಿಠಲನೆ
***
pallavi
Arige moreyiDalo hariye vicArisuvara obbara kANe
caraNam 1
halavanga guNadavanobbarasu taleyilladavanobba pradhAni
taLavAra kirigaNNinavanobba balu boTTu guNadobba shyAnubhOga
caraNam 2
arasana heNDati ratigAri arasana magaLu ahankAri
arasana soseyobbaLanyAyakAri arasana dAsiyu ati krUri
caraNam 3
naDunaDuve yamana paTTaNavu ennoDeya pancEndriya daivakaru
taDeyadante nI dayamADO ennoDeya purandara viTTalane
***
No comments:
Post a Comment