ರಾಗ ಉದಯ
ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ
ಮಥುರಾಪುರದ ಬಿಲ್ಲ ಹಬ್ಬವ ಜರೆದರು ||ಪ||
ಅಕ್ರೂರನೆಂಬ ಕಲಿಹೃದಯ ಬಂದು ನಮ್ಮನ-
ತಿಕ್ರಮಿಸಿ ಕೃಷ್ಣನ ಪುರಕೆ ನಡೆಸಿದ
ವಕ್ರನಾದನು ನಮ್ಮ ಕ್ರೀಡೆಗಳಿಗೆ ಅಕಟ
ಈ ಕ್ರೂರಗಕ್ರೂರ ಪೆಸರೇತಕೆನುತ ||
ರಥವ ನಿಲ್ಲಿಸದೆ ಮೋಸ ಹೋದೆವಲ್ಲ
ಮನೋರಥ ಸಿದ್ಧಿ ಕೊನೆಸಾಗಲಿಲ್ಲ
ರತಿಪತಿಯ ಪಿತನಗಲಿ ಕೆಟ್ಟೆವಲ್ಲ ಇನ್ನು
ಗತಿ ಯಾರು ನಮ್ಮ ಸಂತೈಪರಾರೆನುತ ||
ಈ ಪಳ್ಳಿಯೊಳು ನಮಗೆ ಬಂದಂಥ ಪ್ರಳಯದ
ಆಪತ್ತುಗಳನೆಲ್ಲ ಪರಿಹರಿಸುವ
ಗೋಪಾಲನಿಂದ ಬಂದ ಈ ಪ್ರಳಯ(ಪ್ರಣಯ?)
ತಾಪ ಹರಿಸಲಾಪರುಂಟೆ ಪೇಳಿರೇನುತ ||
ಯುಗವೊಂದು ನಿಮಿಷವಾಗಿದ್ದೆವಲ್ಲ ಅವನ
ನಗೆನೋಟ ಕೂಟಬೇಟಗಳಿಂದ
ಅಗಲಿ ಪೋದನು ಕೃಷ್ಣ ಇಂದು ನಮಗೆ ನಿಮಿಷ
ಯುಗವಾಗಿ ತೋರುತಿನ್ನೇನುಪಾಯವೆನುತ ||
ಯಾಕೆಮ್ಮ ಪುಟ್ಟಿಸಿದೆ ವಿಧಿಯೆ, ನಮಗಿನ್ನೇಕೇ
ಶ್ರೀ ಕೃಷ್ಣನಿಲ್ಲದ ಸಡಗರ, ಭ್ರಮರ
ಕೋಕಿಲಾರವದಿ ಕೋಳುಹೋದೆವಲ್ಲ
ಕಾಕು ಮಾಡಿತು ಕಂದರ್ಪನಸ್ತ್ರವು ಎನುತ ||
ಕಂಗಳ ಬಿಟ್ಟಗಲಿ ದೂರದಿ ನಮ್ಮ ಮ-
ನಂಗಳಲಿ ನೆಲೆಕೊಂಡು ಇರಲೇತಕೆ
ಭಂಗ ಪಡಿಸುವ ನಾನಾ ಪರಿಯಲಿ ಗೋವಳ
ಹೆಂಗೊಲೆಗೆಳೆವುದನು ನಾವರಿತುದಿಲ್ಲವೆನುತ ||
ಕೊಂಬು ಕೊಂಕುಳಲಿ ಶಲ್ಯಗಳ ಪಿಡಿದು ಹೆಗಲ
ಕಂಬಳಿಯ ಪೂದಳಿರಲತೆಯನುಟ್ಟು
ತುಂಬಿಗುರುಳಲಿ ಎಸೆವ ಕೆಂದೂಳಿ ನೀರ
ಜಾಂಬಕನ ಕಾಣದಿನ್ನೆಂತುಳಿಯುವೆವೆನುತ ||
ಅವನ ಲಾವಣ್ಯ ಮೂರುತಿ ನೋಡಿ ಕಂಗಳು
ಅವನ ಜಾಣುವೆ ನುಡಿಗೇಳಿ ಕಿವಿಯು
ಅವನ ಅಧರಾಮೃತವ ಸವಿ ಸವಿದು ಜಿಹ್ವೆ
ದಿವಸಗಳ ಕಳೆಯಲಿನ್ನೆಂತುಪಾಯವೆನುತ ||
ಕೊಳಲ ಧ್ವನಿಯ ಕೇಳಿ ದೂರದಿಂದ ಕೈಯ
ಕೆಲಸಗಳನು ಬಿಟ್ಟು ಬರುವೆವಲ್ಲ
ಕೊಳಲೂದಿ ಸೋಲಿಸುವರಿನ್ನಾರು, ಮನದ
ಅಳವರಿತು ನಮ್ಮ ಸಂತವಿಪರಾರೆನುತ ||
ಮೌನ ಗೌರಿಯ ನೋನೆ ಯಮುನೆಯೊಳಗೆ ನಮ್ಮ
ಮಾನಗಳ ಬಯಲು ಮಾಡಿದ ಮೂರ್ತಿಯ
ಧ್ಯಾನಿಸಲು ಕಣ್ಣ ಮುಂದಿದ್ದಂತಿರೆ
ನಾವಿನ್ನೇನ ನೆನೆದು ಹಂಬಲಿಸುವೆವೆನುತ ||
ಕಾರಮುಗಿಲೊಳು ಹೊಳೆವ ಮಿಂಚಿನಂತೆ ಮುಕುಟ
ಹಾರ ಹೀರಾವಳಿಯ ಪದಕೊಪ್ಪುವ
ವಾರಿಗೆ ಗೋಪಾಲರೊಡನಾಡೊ ನಂದಕು-
ಮಾರನ ಕಾಣದಿನ್ನೆಂತುಳಿವೆವೆನುತ ||
ಜ್ಯೋತಿಲ್ಲದಿರುಳಿನ ಗೃಹದಂತಿರೆ ಪರಂ-
ಜ್ಯೋತಿಯನಗಲಿದ ಈ ತನುಗಳ
ಯಾತಕ್ಕೆ ಸುಡಲೆನುತ ಕಡುನೊಂದು ಲಕ್ಷ್ಮೀ-
ನಾಥ ನಮ್ಮಯ ಮನಕೆ ಗೋಚರಿಸು ಎನುತ ||
ಹಿಮಕರನ ಕಿರಣ ಒಸರುತಿವೆಯೇಕೊ ಅವನ
ಕಮನೀಯ ಪೇರುರವನಾಲಿಂಗಿಸಿ
ಯಮುನೆ ಮಳಲತಟದೊಳೊಪ್ಪುವ ಕೃಷ್ಣನ
ರಮಿಸುವಾನಂದ ಸುಖವೆಂತಪ್ಪುದೆನುತ ||
ಮಧುರೆಯಲಿ ಬಿಲ್ಲ ಹಬ್ಬ ಪುಟ್ಟಿಸಿ ಕುಟಿ-
ಲದಲಿಯೆಮ್ಮ ಪ್ರಾಣಪತಿಯ ಕರೆಸಿದ
ಸುದತಿಯರ ಮನದಳಲು ತಟ್ಟದಿಹುದೆ ನಮ್ಮ
ಎದೆಗಿಚ್ಚು ಕಂಸನ ತಲೆಗೆ ಮೂಡಲಿ ಎನುತ ||
ಈ ಪರಿ ಹಂಬಲಿಸುವ ನಮ್ಮನತಿ ದ-
ಯಾಪರಮೂರ್ತಿ ಉದ್ಧವನ ಕಳುಹಿಸಿ
ರೂಪಿಸಿದ ಕುರುಹಿಂದಲೆಮ್ಮ ಪೊರೆವಭಿನವ
ಪುರಂದರವಿಠಲನೆಂದಿಗು ಬಿಡನೆನುತ ||
***
ಗೋಪಿಯರು ಕೃಷ್ಣನ ವಿರಹಪ್ರಲಾಪದಿಂದ
ಮಥುರಾಪುರದ ಬಿಲ್ಲ ಹಬ್ಬವ ಜರೆದರು ||ಪ||
ಅಕ್ರೂರನೆಂಬ ಕಲಿಹೃದಯ ಬಂದು ನಮ್ಮನ-
ತಿಕ್ರಮಿಸಿ ಕೃಷ್ಣನ ಪುರಕೆ ನಡೆಸಿದ
ವಕ್ರನಾದನು ನಮ್ಮ ಕ್ರೀಡೆಗಳಿಗೆ ಅಕಟ
ಈ ಕ್ರೂರಗಕ್ರೂರ ಪೆಸರೇತಕೆನುತ ||
ರಥವ ನಿಲ್ಲಿಸದೆ ಮೋಸ ಹೋದೆವಲ್ಲ
ಮನೋರಥ ಸಿದ್ಧಿ ಕೊನೆಸಾಗಲಿಲ್ಲ
ರತಿಪತಿಯ ಪಿತನಗಲಿ ಕೆಟ್ಟೆವಲ್ಲ ಇನ್ನು
ಗತಿ ಯಾರು ನಮ್ಮ ಸಂತೈಪರಾರೆನುತ ||
ಈ ಪಳ್ಳಿಯೊಳು ನಮಗೆ ಬಂದಂಥ ಪ್ರಳಯದ
ಆಪತ್ತುಗಳನೆಲ್ಲ ಪರಿಹರಿಸುವ
ಗೋಪಾಲನಿಂದ ಬಂದ ಈ ಪ್ರಳಯ(ಪ್ರಣಯ?)
ತಾಪ ಹರಿಸಲಾಪರುಂಟೆ ಪೇಳಿರೇನುತ ||
ಯುಗವೊಂದು ನಿಮಿಷವಾಗಿದ್ದೆವಲ್ಲ ಅವನ
ನಗೆನೋಟ ಕೂಟಬೇಟಗಳಿಂದ
ಅಗಲಿ ಪೋದನು ಕೃಷ್ಣ ಇಂದು ನಮಗೆ ನಿಮಿಷ
ಯುಗವಾಗಿ ತೋರುತಿನ್ನೇನುಪಾಯವೆನುತ ||
ಯಾಕೆಮ್ಮ ಪುಟ್ಟಿಸಿದೆ ವಿಧಿಯೆ, ನಮಗಿನ್ನೇಕೇ
ಶ್ರೀ ಕೃಷ್ಣನಿಲ್ಲದ ಸಡಗರ, ಭ್ರಮರ
ಕೋಕಿಲಾರವದಿ ಕೋಳುಹೋದೆವಲ್ಲ
ಕಾಕು ಮಾಡಿತು ಕಂದರ್ಪನಸ್ತ್ರವು ಎನುತ ||
ಕಂಗಳ ಬಿಟ್ಟಗಲಿ ದೂರದಿ ನಮ್ಮ ಮ-
ನಂಗಳಲಿ ನೆಲೆಕೊಂಡು ಇರಲೇತಕೆ
ಭಂಗ ಪಡಿಸುವ ನಾನಾ ಪರಿಯಲಿ ಗೋವಳ
ಹೆಂಗೊಲೆಗೆಳೆವುದನು ನಾವರಿತುದಿಲ್ಲವೆನುತ ||
ಕೊಂಬು ಕೊಂಕುಳಲಿ ಶಲ್ಯಗಳ ಪಿಡಿದು ಹೆಗಲ
ಕಂಬಳಿಯ ಪೂದಳಿರಲತೆಯನುಟ್ಟು
ತುಂಬಿಗುರುಳಲಿ ಎಸೆವ ಕೆಂದೂಳಿ ನೀರ
ಜಾಂಬಕನ ಕಾಣದಿನ್ನೆಂತುಳಿಯುವೆವೆನುತ ||
ಅವನ ಲಾವಣ್ಯ ಮೂರುತಿ ನೋಡಿ ಕಂಗಳು
ಅವನ ಜಾಣುವೆ ನುಡಿಗೇಳಿ ಕಿವಿಯು
ಅವನ ಅಧರಾಮೃತವ ಸವಿ ಸವಿದು ಜಿಹ್ವೆ
ದಿವಸಗಳ ಕಳೆಯಲಿನ್ನೆಂತುಪಾಯವೆನುತ ||
ಕೊಳಲ ಧ್ವನಿಯ ಕೇಳಿ ದೂರದಿಂದ ಕೈಯ
ಕೆಲಸಗಳನು ಬಿಟ್ಟು ಬರುವೆವಲ್ಲ
ಕೊಳಲೂದಿ ಸೋಲಿಸುವರಿನ್ನಾರು, ಮನದ
ಅಳವರಿತು ನಮ್ಮ ಸಂತವಿಪರಾರೆನುತ ||
ಮೌನ ಗೌರಿಯ ನೋನೆ ಯಮುನೆಯೊಳಗೆ ನಮ್ಮ
ಮಾನಗಳ ಬಯಲು ಮಾಡಿದ ಮೂರ್ತಿಯ
ಧ್ಯಾನಿಸಲು ಕಣ್ಣ ಮುಂದಿದ್ದಂತಿರೆ
ನಾವಿನ್ನೇನ ನೆನೆದು ಹಂಬಲಿಸುವೆವೆನುತ ||
ಕಾರಮುಗಿಲೊಳು ಹೊಳೆವ ಮಿಂಚಿನಂತೆ ಮುಕುಟ
ಹಾರ ಹೀರಾವಳಿಯ ಪದಕೊಪ್ಪುವ
ವಾರಿಗೆ ಗೋಪಾಲರೊಡನಾಡೊ ನಂದಕು-
ಮಾರನ ಕಾಣದಿನ್ನೆಂತುಳಿವೆವೆನುತ ||
ಜ್ಯೋತಿಲ್ಲದಿರುಳಿನ ಗೃಹದಂತಿರೆ ಪರಂ-
ಜ್ಯೋತಿಯನಗಲಿದ ಈ ತನುಗಳ
ಯಾತಕ್ಕೆ ಸುಡಲೆನುತ ಕಡುನೊಂದು ಲಕ್ಷ್ಮೀ-
ನಾಥ ನಮ್ಮಯ ಮನಕೆ ಗೋಚರಿಸು ಎನುತ ||
ಹಿಮಕರನ ಕಿರಣ ಒಸರುತಿವೆಯೇಕೊ ಅವನ
ಕಮನೀಯ ಪೇರುರವನಾಲಿಂಗಿಸಿ
ಯಮುನೆ ಮಳಲತಟದೊಳೊಪ್ಪುವ ಕೃಷ್ಣನ
ರಮಿಸುವಾನಂದ ಸುಖವೆಂತಪ್ಪುದೆನುತ ||
ಮಧುರೆಯಲಿ ಬಿಲ್ಲ ಹಬ್ಬ ಪುಟ್ಟಿಸಿ ಕುಟಿ-
ಲದಲಿಯೆಮ್ಮ ಪ್ರಾಣಪತಿಯ ಕರೆಸಿದ
ಸುದತಿಯರ ಮನದಳಲು ತಟ್ಟದಿಹುದೆ ನಮ್ಮ
ಎದೆಗಿಚ್ಚು ಕಂಸನ ತಲೆಗೆ ಮೂಡಲಿ ಎನುತ ||
ಈ ಪರಿ ಹಂಬಲಿಸುವ ನಮ್ಮನತಿ ದ-
ಯಾಪರಮೂರ್ತಿ ಉದ್ಧವನ ಕಳುಹಿಸಿ
ರೂಪಿಸಿದ ಕುರುಹಿಂದಲೆಮ್ಮ ಪೊರೆವಭಿನವ
ಪುರಂದರವಿಠಲನೆಂದಿಗು ಬಿಡನೆನುತ ||
***
pallavi
gOpiyaru krSNanaviraha pralApadinda mathurApurada billa habbava jaredaru
caraNam 1
akrUranemba kalihrdaya bandu nammana tikramisi krSNana purake naDesida
vakranAdanu namma krIDagaLige akaTa I krUraga krUra pesarEtakenuta
caraNam 2
rathava nillisade mOsa hOdavalla manOratha siddhi kone sAgalilla
ratipatiya pitanagali keTTavalla innu gati yAru namma sandaiparArenuta
caraNam 3
I paLLiyoLu namage bandantha praLayada AbattugaLella pariharisuva
gOpAlaninda banda I praLaya tApa harisalAparuNTe pELirEnuta
caraNam 4
yugavondu nimiSavgiddevalla avana nage nODa kUDa bEDagaLinda
agali pOdanu krSNa indu namage nimiSa yugavAgi tOrutinnEnupAyavenuta
caraNam 5
yAkemma puTTiside vidhiya namaginnEkE shrI krSNanillada saDagara bhramara
kOkilAravadi kOLu hOdevalla kAku mADidu kandarpanastravu enuta
caraNam 6
kangaLa biTTagali dUradi namma mangaLali nelekoNDu iralEtake
bhanga paDisuva nAnA pariyali gOvaLa hengolegeLavudanu nAvaritudillavenuta
caraNam 7
kombu konguLali shalyagaLa piDidu hegala kambaLiya pudaLira lateyanuTTu
tumbiguruLali eseva kendULi nIra jAmbagaLa kANinnetuLiyuve venuta
caraNam 8
avana lAvaNya mUruti nODi kangaLu avana jANuve nuDi gELi kiviyu
avana adharAmrtava savi savidu jihve divasagaLa kaLeyaninnendupAyavenuta
caraNam 9
koLala dhvaniya kELi dUradinda kaiya kelasagaLanu biTTu baruvevalla
koLalUdi sOlisuvarinnAru manada aLavahidu namma santaviparArenuta
caraNam 10
mauna geLariya nOhi yamuneyoLage namma mAnagaLa bayalu mADida mUrtiya
dhyAnisalu kaNNa muddiddantire nAvinnEna nenedu hambalisuve venuta
caraNam 11
kAramugiloLu hoLeva mincinante mukuTa hAra hIrAvaLiya padagoppuva
vArge gOpAlaroDanADo nanda kumArana kANadinnentuLive venuta
1
caraNam 2
jyOtilladiruLina grhadantire paramjyOtiyanagalida I tanugaLa
yAtakke suDalenuta kaDu nondu laksmInAtha nammaya manake gOcarisu enuta
1
caraNam 3
himakarana kiraNa osarutiveyEko avana kamanIya pEruravanAlingisi
yamune maLalataTadoLoppuva krSNana ramisuvAnanda sukhaventappudenuta
1
caraNam 4
mathureyali billa habba puTTisi kuTiladaliyemma prANapatiya karesida
sudatiyara manadaLalu taTTadihude namma edegiccu kamsana talege mUDali enuta
1
caraNam 5
I pari hambalisuva nammanati dayApara mUrti uddhavana kaLuhisi
rUpisida kuruhindalemma porevabhinava purandara viTTalanendigu biDanenuta
***
No comments:
Post a Comment