Friday, 6 December 2019

ಪಥ ನಡೆಯದೈಯ ಪರಲೋಕಕೈದುವರೆ purandara vittala

ಪುರಂದರದಾಸರು
ರಾಗ ಮುಖಾರಿ ಝಂಪೆ ತಾಳ)

ಪಥ ನಡೆಯದಯ್ಯ ಪರಲೋಕಕೈದುವರೆ(/ ಪರಲೋಕಕೈದುವೊಡೆ ?) ||ಪ||
ಮನ್ಮಥನೆಂಬ ಕಳ್ಳ ಮಾರ್ಗವ ಕಟ್ಟಿ ಸುಲಿಯುತಿರೆ ||ಅ ||

ಗಿಳಿವಿಂಡು ಕೋಗಿಲೆ ವಸಂತ ಮಾರುತ ಭ್ರಮರ
ಬಲವೆರಸಿ ಮದನ ಮಾರ್ಗವ ಕಟ್ಟಲು
ಬಲವುಳ್ಳ ಭಟರು(/ಭಕ್ತ) ಬಲು ಸನ್ಯಾಸಿ ಯೋಗಿಗಳು
ಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು ||

ತನುರೋಮ ಗಿಡವೃಕ್ಷ ಥಳಥಳಿಪ ಲತೆ ಮೆರೆವ
ಘನಸಿಂಹ ಖಗಮೃಗಗಳಟ್ಟಣಿಸುವ
ವನಿತೆಯರ ಕಾಯಕಾಂತಾರದಲಿ ದುರ್ಗಮ
ಸ್ತನಪರ್ವತದ ಕಣಿವೆಯಲಿ ಕಟ್ಟಿ ಸುಲಿಯುತಿರೆ ||

ಕಾಳಗದೊಳಿದಿರಿಲ್ಲ ಸುರನರೋರಗರ(/ಸುರರು ದುರ್ಜನರು) ಕ-
ಟ್ಟಾಳು ಮನ್ಮಥನ ಛಲದಂಕ ಬಿರುದು
ಪೇಳಲೆನ್ನಲಳವಲ್ಲ ಪುರಂದರವಿಠಲನ ( /ಬಾಡದಾದಿಕೇಶವನೊಲವಿನ )
ಆಳು ಸಂಗಡವಿದ್ದವರಗೆ ಭಯವಿಲ್ಲ ||
***

pallavi

patha naDeyadayya paralOkakaiduvare

anupallavi

manmathanemba kaLLa mArgava kaTTi suliyutire

caraNam 1

kiLiviNDu kOkile vasanta mAruta bhramara balaverasi madana mArgava kaTTalu
balavuLLa bhaTaru balu sanyAsi yOgigaLu sulisi koNDaru kelaru sikkidaru kelaru

caraNam 2

tanu rOma giDa vrkSa taLida bhujaladera mereye ghana simha khaga mrgagaLaTTaNisuva
vaniteyara kAyakAntAradali durgama stana parvatada kaNiveyasi kaTTi suliyutire

caraNam 3

kALaga toLidirilla suranarOragara kaTTALu manmathana chaladanga birudu
beLanellaLavalla purandara viTTalana Alu sankaTaviddhavarage bhayavilla
***

ಪಥ ನಡೆಯದೈಯ ಪರಲೋಕಕೈದುವರೆ  ಪ.

ನ್ಮಥನೆಂಬ ಕಳ್ಳ ಮಾರ್ಗವಕಟ್ಟಿಸುಲಿಯುತಿರೆಅಗಿಳಿವಿಂಡು ಕೋಗಿಲೆ ವಸಂತ ಮಾರುತಭ್ರಮರ ಬಲವೆರಸಿಮದನ ಮಾರ್ಗವ ಕಟ್ಟಲುಬಲವುಳ್ಳ ಭಟರು ಬಲು ಸನ್ಯಾಸಿ ಯೋಗಿಗಳುಸುಲಿಸಿಕೊಂಡರು ಕೆಲರು ಸಿಕ್ಕಿದರು ಕೆಲರು 1

ತನು ರೋಮ ಗಿಡ ವೃಕ್ಷ ತಳಿತ ಭುಜಲತೆ ಮೆರೆಯೆಘನ ಸಿಂಹಖಗ ಮೃಗಗಳಟ್ಟಿಣಿಸುವವನಿತೆಯರ ಕಾಯಕಾಂತಾರದಲಿ ದುರ್ಗಮಸ್ತನ ಪರ್ವತದ ಕಣಿವೆಯಲಿಕಟ್ಟಿಸುಲಿಯುತಿರೆ2

ಕಾಳಗದೊಳಿದಿರಲ್ಲ ಸುರನರೋರಗರ ಕಟ್ಟಾಳು ಮನ್ಮಥನ ಛಲದಂಕ ಬಿರುದುಪೇಳಲೆನ್ನಳವಲ್ಲ ಪುರಂದರವಿಠಲನಆಳು ಸಂಗಡವಿದ್ದರವಗೆ ಭಯವಿಲ್ಲ 3
*********

No comments:

Post a Comment