Sunday, 5 December 2021

ಗುಮ್ಮನೆಲ್ಲಿಹ ತೋರಮ್ಮ ನಮ್ಮಮ್ಮ ಸುಮ್ಮನಂಜಿಸ purandara vittala GUMMANELLIHA TORAMMA NAMMAMMA SUMMANANJISA



ಪುರಂದರದಾಸರು

ಗುಮ್ಮನೆಲ್ಲಿಹ ತೋರಮ್ಮ
ಸುಮ್ಮನಂಜಿಸಬೇಡಮ್ಮ ||ಪ||

ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ
ವಂಚನೆಯಿಲ್ಲವೆ ತಿರುಗಿ ಬಂದೆನೆ ನಾನು
ಹಂಚಿಸಿ ಕೊಟ್ಟನೆ ಅವರವರಿಗೆ ನಾ
ಹಾಂಗು ನೋಡಿದರು ಕಾಣೆನೆ ಗುಮ್ಮನ ||

ಸಿಂಧುವಿನೊಳಗೆ ಆನಂದದಿ ಮಲಗಿದ್ದೆ
ಒಂದು ನಾಭಿಕಮಲದಿ ಬೊಮ್ಮನ ಪುಟ್ಟಿಸಿದೆ
ಅಂಧಕಾರದಿ ಪೋಗಿ ಒಬ್ಬನೆ ಮಲಗಿದೆ
ಹಾಂಗು ನೋಡಿದರು ಕಾಣೆನೆ ಗುಮ್ಮನ ||

ಈರೇಳು ಲೋಕವ ಉದರದೊಳಗೆ ಇಟ್ಟು
ತೋರಿದೆ ಬ್ರಹ್ಮಾಂಡವ ಬಾಯಲಿ ನಾನು
ಘೋರ ರೂಪದಿ ಬಂದ ಗಾಳಿ ಅಸುರನ ಕೊಂದೆ
ಹಾಂಗು ನೋಡಿದರು ಕಾಣೆನೆ ಗುಮ್ಮನ ||

ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು
ಮೇಲೆ ನಾನಾ ವಿಧನಾಟ್ಯವಾಡುತಲಿದ್ದೆ
ಒಲಿದು ಭಾಗ್ಯವನಿತ್ತೆ ನಾಗಪತ್ನಿಯರಿಗೆ
ಹಾಂಗು ನೋಡಿದರು ಕಾಣೆನೆ ಗುಮ್ಮನ ||

ಅಕ್ರೂರಗೆ ವಿಶ್ವ ರೂಪವ ತೋರಿದೆ
ಘಕ್ಕನೆ ರಥವೇರಿ ಮಧುರೆಗೆ ಪೋದೆ
ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ
ಹಾಂಗು ನೋಡಿದರು ಕಾಣೆನೆ ಗುಮ್ಮನ ||

ಬಿಲ್ಲುಹಬ್ಬಕೆ ಪೋಗಿ ಮಲ್ಲರ ಮಡುಹಿದೆ
ಅಲ್ಲಿ ಮಾವನ ಕೊಂದು ಮುತ್ಯಗೆ ಒಲಿದೆ
ಚೆಲ್ವ ಗೋಪಾಲ ಶ್ರೀ ಪುರಂದರವಿಠಲನ
ಬಾರಿ ಬಾರಿಗೆ ನೀ ಬೆದರಿಸಬೇಡಮ್ಮ ||
***

ರಾಗ ತೋಡಿ ಆದಿ ತಾಳ (raga tala may differ in audio)

pallavi

gummanelliha tOramma summananjisa bEDamma

caraNam 1

pancAshat kOTi vistIrNada bhUmiya vancaneyillave tirugi bandene nAnu
hancisi koTTane avaravarige nA hAngu nODidaru kANene gummana

caraNam 2

sindhivinoLage Anandadi malagidde ondu nAbhi kamaladi bommana puTTiside
andhakAradi pOgi oppane malagide hAngu nODidaru kANene gummana

caraNam 3

IrELu lOkava udaradoLage iTTu tOride brahmANDava bAyali nAnu
ghOra rUpadi banda kALIyasurana konde hAngu nODidaru kANene gummana

caraNam 4

kALiya maDu dhumuki kALingana heDe tuLIdu mEle nAnA vidhanATyavADutalidde
olidu bhAgyavanitte nAgapatniyarige hAngu nODidaru kANene gummana

caraNam 5

akrUrage vishva rUpava tOride ghakkana rathavEri mathurege pOde
sokkida rajakana kondu maDiyanuTTe hAngu nODidaru kANene gummana

caraNam 6

billuhabbake pOgi mallara maDuhide alli mAnava kondu mutyage olide
celva gOpAla shrI purandara viTTalana bAri bArige nI pedarisa bEDamma
***

ಗುಮ್ಮನೆಲ್ಲಿಹ ತೋರಮ್ಮನಮ್ಮಮ್ಮ|
ಸುಮ್ಮನಂಜಿಸಬೇಡಮ್ಮ ಪ

ಪಂಚಾಶತ್ಕೋಟಿ ವಿಸ್ತೀರ್ಣದ ಭೂಮಿಯ |ವಂಚನೆಯಿಲ್ಲದೆ ತಿರುಗಿ ಬಂದೆನೆ ನಾನು ||ಹಂಚಿಸಿಕೊಟ್ಟೆನೆ ಅವರವರಿಗೆ ನಾ |ಅಂತು ನೋಡಿದರೂ ಕಾಣೆನೆ ಗುಮ್ಮನ 1

ಈರೇಳು ಲೋಕವನುದರದೊಳಗೆ ಇಟ್ಟು |ತೋರಿದೆ ಬ್ರಹ್ಮಾಂಡ ಬಾಯೊಳಗೆ ||ಘೋರರೂಪದಿ ಬಂದ ಗಾಳಿಯ ಸುರನ ಕೊಂದೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 2

ಕಾಳಿಯ ಮಡು ಧುಮುಕಿ ಕಾಳಿಂಗನ ಹೆಡೆ ತುಳಿದು |ಮೇಲೆ ನಾಟ್ಯಂಗಳ ನಾನಾಡುತಲಿದ್ದೆ ||ಓಲೆಯ ಭಾಗ್ಯವನಿತ್ತೆ ನಾಗಪತ್ನಿಯರಿಗೆ |ಅಲ್ಲಿ ನೋಡಿದರೂ ಕಾಣೆನೆ ಗುಮ್ಮನ 3

ಅಕ್ರೂರನಿಗೆ ವಿಶ್ವರೂಪವ ತೋರಿದೆ |ಘಕ್ಕನೆ ರಥವೇರಿ ಮಥುರೆಗೆ ಪೋದೆ ||ಸೊಕ್ಕಿದ ರಜಕನ ಕೊಂದು ಮಡಿಯನುಟ್ಟೆ |ಹೊಕ್ಕು ನೋಡಿದರೂ ಕಾಣೆನೆ ಗುಮ್ಮನ 4

ಬಿಲ್ಲು ಹಬ್ಬಕೆ ಹೋಗಿ ಮಲ್ಲರ ಮಡುಹಿದೆ |ಅಲ್ಲಿ ಮಾವನ ಕೊಂದು ಮುತ್ತಯ್ಯಗೊಲಿದೆ ||ಚೆಲ್ವಗೋಪಾಲ ಶ್ರೀ ಪುರಂದರವಿಠಲನ |ಸೊಲ್ಲು-ಸೊಲ್ಲಿಗೆ ನೀ ಬೆದರಿಸಬೇಡಮ್ಮ 5
*********

No comments:

Post a Comment