Friday, 6 December 2019

ವರುಷ ಕಾರಣವಿಲ್ಲ ಹರಿಭಜನೆಗೆ purandara vittala

ಪುರಂದರದಾಸರು
ರಾಗ ಕಾಂಭೋಜ ಅಟತಾಳ

ವರುಷ ಕಾರಣವಲ್ಲ ಹರಿ ಭಜನೆಗೆ ||ಪ||
ಅರಿತು ತತ್ವಜ್ಞರು ಕೇಳಿ ಸನ್ಮುದದಿ ||ಅ||

ತರಳತನದಲಿ ಕಂಡ ಹರಿಯ ಧ್ರುವರಾಯನು
ಹಿರಿಯತಾನವನಪ್ಪ ಕಂಡನೇನೋ
ತರಳ ಪ್ರಹ್ಲಾದನು ನರಹರಿಯ ತಾ ಕಂಡ
ಹಿರಿಯನವನಪ್ಪ ತಾ ಮರೆಯಲಿಲ್ಲೇನೋ ||

ಹಿರಿದಾಗಿ ಬಹುಕಾಲ ಮರದ ಮೇಲೆ ಬಾಳುವ
ಇರುಳು ಗಣ್ಣಿನ ಗೂಬೆ ತಾ ದೊಡ್ಡದೆ
ಮರಿಯಾದ ಅರಗಿಣಿಯು ಹರಿ ಕೃಷ್ಣ ಎಂದೊದರೆ
ಮರಿ ದೊಡ್ಡದೆಂತೆಂದು ಪೇಳುವರು ಜನರು ||

ಸರುವದಾ ಒದರುವರು ಅರಣ್ಯವಾಸಿಗಳು
ಮರದಡಿಗೆ ಬಿದ್ದ ಎಲೆಗಳ ತಿನ್ನುತ
ಪರಮ ಪಾತಕಿ ಅಜಾಮಿಳನು ನಾರಗ ಎನಲು
ಭರದಿಂದ ಸಲಹಿದನು ಪುರಂದರವಿಠಲ ||
***

pallavi

varuSa kAraNavalla hari bhajanege

anupallavi

aridu tatvajnaru sanmadadi

caraNam 1

taraLatanadali kaNDa hariya dhruvarAyanu hariyatAnavappa kaNDanEnO
taraLa prahlAdanu narahariya tA kaNDa hariyavanappa tA mareyalillEnO

caraNam 2

haridAgi bahukAla marada mEle bALuva iruLu gaNNina gUbe tA doTTade
mariyAda aragiNiyu hari krSNa endodhare mari doDDadentandu pELuvaru janaru

caraNam 3

saruvadA odaruvaru araNya vAsigaLu maradaDige bidda elegaLa tinnuta
parama pAtaki ajAmiLanu nAraka enalu bharadinda salahidanu purandara viTTala
***

ವರುಷ ಕಾರಣವಿಲ್ಲ ಹರಿಭಜನೆಗೆ |
ಅರಿತ ಸಜ್ಜನರೆಲ್ಲಕೇಳಿಸಮ್ಮುದದಿ ಪ.

ತರಳತನದಲಿ ಕಂಡ ಹರಿಯ ಧ್ರುವರಾಯನು |ಹಿರಿಯ ತಾನವನಯ್ಯ ಕಂಡನೇನೂ ? ||ತರಳ ಪ್ರಹ್ಲಾದ ನರಹರಿಯನು ತಾ ಕಂಡ |ಹಿರಿಯನವನಪ್ಪ ತಾ ಮರೆಯಲಿಲ್ಲವೇನೊ ? 1

ಹಿರಿದಾಗಿ ಬಹುಕಾಲ ಮರದ ಮೇಲ್ಬಾಳುವ |ಇರುಳು ಗಣ್ಣಿನ ಗೂಗೆ ತಾ ದೊಡ್ಡದೆ ? ||ಮರೆಯಾದ ಅರಗಿಣಿ ಹರಿಕೃಷ್ಣ ಎಂದೊದರೆ |ಮರಿ ದೊಡ್ಡದೆಂತೆಂದು ಪೇಳುವರು ಬುಧರು 2

ಸುರುವದಾ ಒದರುವರು ಅರಣ್ಯವಾಸಿಗಳು |ಮರದಡಿಗೆ ಬಿದ್ದ ಎಲೆಗಳ ತಿನ್ನುತ ||ಪರಮಪಾತಕಿ ಅಜಾಮಿಳನು ನಾರಗ ಎನಲು |ಭರದಿಂದ ಸಲುಹಿದನು ಪುರಂದರವಿಠಲ 3
*********

No comments:

Post a Comment