Wednesday 3 November 2021

ಮಂದಗಮನೆ ಇವನಾರೆ ಪೇಳಮ್ಮ ಮಂದರಧರ purandara vittala MANDAGAMANE IVANAARE PELAMMA MANDARADHARA




ಮಂದಗಮನೆ ಇವನಾರೆ ಪೇಳಮ್ಮ
ಮಂದರಧರ ಗೋವಿಂದ ಕಾಣಮ್ಮ ||ಪ||

ಕೆಂದಳಿರು ನಖ ಶಶಿಬಿಂಬ ಪದಪದ್ಮ
ಅಂದುಗೆ ಇಟ್ಟವನಾರೆ ಪೇಳಮ್ಮ
ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ
ನಂದನ ಕಂದ ಮುಕುಂದ ಕಾಣಮ್ಮ ||

ಉಡುಗೆ ಪೀತಾಂಬರ ನಡುಗೆ ಹೊನ್ನುಡುದಾರ
ಕಡಗ ಕಂಕಣವಿಟ್ಟವನಾರಮ್ಮ
ಮಡದಿ ಕೇಳ್ ಸಕಲ ಲೋಕಂಗಳ ಕುಕ್ಷಿಯೊ-
ಳೊಡನೆ ತೋರಿದ ಜಗದೊಡೆಯ ಕಾಣಮ್ಮ ||

ನೀರದನೀಲದಂತೆಸವ ವಕ್ಷದಿ ಕೇ-
ಯೂರಹಾರವನಿಟ್ಟವನಾರಮ್ಮ
ನೀರೆ ಕೇಳು ನಿರ್ಜರರಾದವರಿಗೆ
ಪ್ರೇರಿಸಿ ಫಲವಿತ್ತುದಾರಿ ಕಾಣಮ್ಮ ||

ಶಂಖಚಕ್ರವು ಗದೆ ಪದ್ಮ ಕೈಯೊಳಗಿಟ್ಟ-
ಲಂಕರಿಸುವನೀತನಾರಮ್ಮ
ಪಂಕಜಮುಖಿ ಶ್ರೀಭೂದೇವಿಯರರಸನು
ಶಂಕೆಯಿಲ್ಲದೆ ಗೋಪಿತನಯ ಕಾಣಮ್ಮ ||

ಕಂಬುಕಂಧರ ಕರ್ಣಾಲಂಬಿತಕುಂಡಲ
ಅಂಬುಜ ಮುಖದವನಾರೆ ಹೇಳಮ್ಮ
ರಂಭೆ ಕೇಳೀತ ಪುರಂದರವಿಠಲ
ನಂಬಿದ ಭಕ್ತಕುಟುಂಬಿ ಕಾಣಮ್ಮ ||
***

ರಾಗ ಮೋಹನ. ಅಟ ತಾಳ (raga, taala may differ in audio)

pallavi

mandagamane ivan yAre pElamma mandaradhara gOvinda kANamma

caraNam 1

kendaLiru nakha shashibimba pada padma anduge iTTavan yAre pELamma
andu kALingana peDeya tuLida diTTa nandana kanda mukunda kANamma

caraNam 2

uDuge pItAmbara naDuge honnuDudAra kaDaga kankaNa viTTavan yAramma
maDadi kEL sakala lOkangaLa kukSiyoLoDane tOrida jagadoDeya kANamma

caraNam 3

nIrada nIladantesava vakSadi kEyurava hAravaniTTavan yAramma
nIre kELu nirjararAdavarige prEsiri balavittudAri kANamma

caraNam 4

shankha cakravu gade padma kaiyoLagiTTalankarisuvanItan yAramma
pankaja mukhi shrI bhUdEviyara rasanu shankeyillade gOpi tanaya kANamma

caraNam 5

kambu kandhara karNAlambida kuNDala ambuja mukhadavan yAre hELamma
rambhE kELIta purandara viTTala nambida bhaktara kuTumbi kANamma
***
 
ಮಂದಗಮನೆ ಇವನಾರೆ ಪೇಳಮ್ಮ |
ಮಂದರಧರಗೋವಿಂದ ಕಾಣಮ್ಮ ಪ

ಕೆಂದಳಿದನಖಶಶಿಬಿಂಬ ಪಾದಪದ್ಮ |ಅಂದುಗೆಯಿಟ್ಟವನಾರು ಪೇಳಮ್ಮ ||ಅಂದು ಕಾಳಿಂಗನ ಪೆಡೆಯ ತುಳಿದ ದಿಟ್ಟ |ನಂದನ ಕಂದ ಮುಕುಂದ ಕಾಣಮ್ಮ 1

ಉಡುಗೆ ಪೀತಾಂಬರ ನಡುವೀಣೆ ಉಡುದಾರ |ಕಡಗ-ಕಂಕಣವಿಟ್ಟವನಾರಮ್ಮ ||ಮಡದಿ ಕೇಳ್ ಸಕಲಲೋಕಂಗಳ ಕುಕ್ಷಿಯೊಳ್ |ಒಡನೆ ತೋರಿದ ಜಗದೊಡೆಯ ಕಾಣಮ್ಮ 2

ನೀರದನೀಲದಂತೆಸೆವ ವಕ್ಷದಿ ಕೇ-|ಯೂರ-ಹಾರಗಳನಿಟ್ಟವನಾರಮ್ಮ ||ನೀರೆ ಕೇಳು ನಿರ್ಜರರಾದವರಿಗೆ |ಪ್ರೇರಿಸಿ ಫಲವಿತ್ತು ದಾರಿ ಕಾಣಮ್ಮ 3

ಶಂಖ ಚಕ್ರವ, ಗದೆ-ಪದ್ಮ ಕೈಯೊಳಗಿಟ್ಟ-|ಲಂಕೃತನಹನೀತನಾರಮ್ಮ ||ಪಂಕಜಮುಖಿಶ್ರೀಭೂದೇವಿಯರರಸನು |ಶಂಕೆಇಲ್ಲದೆ ಗೋಪೀತನಯ ಕಾಣಮ್ಮ4

ಕಂಬುಕಂಧರಕರ್ಣಾಲಂಬಿತಕುಂಡಲ|ಅಂಬುಜಮುಖದವನಾರೆ ಪೇಳಮ್ಮ ||ರಂಭೆ ಕೇಳೀತ ಪುರಂದರವಿಠಲ |ನಂಬಿದ ಭಕ್ತಕುಟುಂಬಿ ಕೇಳಮ್ಮ 5
**********

No comments:

Post a Comment