ರಾಗ ಪೂರ್ವಿ. ಅಟ ತಾಳ
ಎಂಥವನೇ ಗೋಪಿ, ನಿನ್ನ ಕಂದ
ಎಂಥವನೇ ಗೋಪಿ ||ಪ||
ಮದಗಜಗಮನೇರು ಇದಿರಿಗೆ ಬಂದರೆ
ಎದೆಬದಿ ಮುಟ್ಟುವುದಿದೇನು ಚಂದ ||
ಸೊಕ್ಕಿನಿಂದಲಿ ಬಂದು ತೆಕ್ಕೆಯೊಳ್ ಪಿಡಿವನು
ಚಿಕ್ಕವನೇನಿವ ಠಕ್ಕ ಗೋವಿಂದ ||
ಚೆಲುವ ಪುರಂದರವಿಠಲರಾಯನು
ಒಲಿಸಿ ರಮಿಸಿದನು ಲಲನೆಯರೆಲ್ಲರ ||
***
ಎಂಥವನೇ ಗೋಪಿ, ನಿನ್ನ ಕಂದ
ಎಂಥವನೇ ಗೋಪಿ ||ಪ||
ಮದಗಜಗಮನೇರು ಇದಿರಿಗೆ ಬಂದರೆ
ಎದೆಬದಿ ಮುಟ್ಟುವುದಿದೇನು ಚಂದ ||
ಸೊಕ್ಕಿನಿಂದಲಿ ಬಂದು ತೆಕ್ಕೆಯೊಳ್ ಪಿಡಿವನು
ಚಿಕ್ಕವನೇನಿವ ಠಕ್ಕ ಗೋವಿಂದ ||
ಚೆಲುವ ಪುರಂದರವಿಠಲರಾಯನು
ಒಲಿಸಿ ರಮಿಸಿದನು ಲಲನೆಯರೆಲ್ಲರ ||
***
pallavi
enthavanE gOpi ninna kanda enthavanE gOpi
caraNam 1
madagaja gamaneyu idirige bandare edebadi muTTuvudidEnu canda
caraNam 2
sokkinindali bandu tekkeyoL piDivanu cikkavanEniva Dhakka gOvinda
caraNam 3
celuva purandara viTTalarAyanu olisi ramisidanu lalaneyarellara
***
No comments:
Post a Comment