ರಾಗ ನವರೋಜು ಏಕತಾಳ
ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ , ಹೆ-
ಮ್ಮಕ್ಕಳೆಲ್ಲರು ಕೂಡಿ ನಮ್ಮಕ್ಕರ ತೀರಿಸಿಕೊಂಬ ||ಪ||
ಅಂದು ಮೊದಲಾಗಿ ನಮ್ಮ
ಮಂದಿರದೊಳು ಪೊಕ್ಕು
ತಿಂದ ಮೀಸಲ ಬೆಣ್ಣೆ
ದಂಧೆ ಮಾಡಿ ಪೋದನಕ್ಕ , ಬಹು
ದಂಧೆ ಮಾಡಿ ಪೋದನಕ್ಕ ||
ಗಾಢದಿಂದಲಿವನ
ಹೆಡೆಮುಡಿಯ ಬಿಗಿದು ಕಟ್ಟಿ
ಒಡಿಹೋದರೆ ಸಿಕ್ಕ , ಕಿಡಿ-
ಗೇಡಿ ರಂಗನ ಬಿಡಬೇಡಿ , ಕಿಡಿ
ಗೇಡಿ ರಂಗನ ಬಿಡಬೇಡಿ ||
ಯಾರು ಇಲ್ಲದ ವೇಳೆ
ದಾರಿ ನೋಡುತ್ತಲಿವ
ಸೂರೆ ಮಾಡುವ ಹಾಲು ಮೊಸರು
ಚೋರ ರಂಗನ ಬಿಡಬೇಡಿರೆ
ಧೀರ ಕೃಷ್ಣನ ಬಿಡಬೇಡಿರೆ ||
ಗಂಡನಿಲ್ಲದ ವೇಳೆ ನೋಡಿ
ಭಂಡು ಮಾಡಿ ಸೀರೆ ಕದ್ದು-
ಕೊಂಡು ಹಾಲು ಕೆನೆಯ ಕದ್ದ
ಲಂಡ ರಂಗನ ಬಿಡಬೇಡಿರೆ
ಪುಂಡ ಕೃಷ್ಣನ ಬಿಡಬೇಡಿರೆ ||
ಕಾದುಕೊಂಡಿವ ಬಾಹೊ
ಹಾದಿಯ ನೋಡಿ ನಾ ದಣಿದೆ
ಆದುದೆಮ್ಮಯ ಕಾಮ ಸಾಧಿಸಿಕೊಂಬ
ಕ್ರೋಧ ಸಾಧಿಸಿಕೊಂಬ ||
ಒರಳಿಲಿ ಕಟ್ಟಿಸಿಕೊಂಡು
ಒರಳ ಕೊಂಡೋಡುವನಿಂಥ
ದುರುಳ ಕೃಷ್ಣನ ಬಿಡಬೇಡಿ
ಮರುಳ ಮಾಡಿ ಹೋದನಮ್ಮ
ಬಹು ಮೋಸ ಮಾಡಿ ಹೋದನಮ್ಮ ||
ಇಂದಿನ ದಿನ ಸುದಿನ
ಮಂದರಧರ ದೊರೆತ ಕಾರಣ
ತಂದೆ ಪುರಂದರ ವಿಠಲನ್ನ ಅಪ್ಪಿಕೊಂಬ
ಸಂತೋಷದಿಂದ ಅಪ್ಪಿಕೊಂಬ ||
***
ಇಕ್ಕೊ ನವನೀತ ಚೋರ ಸಿಕ್ಕಿದನಮ್ಮ , ಹೆ-
ಮ್ಮಕ್ಕಳೆಲ್ಲರು ಕೂಡಿ ನಮ್ಮಕ್ಕರ ತೀರಿಸಿಕೊಂಬ ||ಪ||
ಅಂದು ಮೊದಲಾಗಿ ನಮ್ಮ
ಮಂದಿರದೊಳು ಪೊಕ್ಕು
ತಿಂದ ಮೀಸಲ ಬೆಣ್ಣೆ
ದಂಧೆ ಮಾಡಿ ಪೋದನಕ್ಕ , ಬಹು
ದಂಧೆ ಮಾಡಿ ಪೋದನಕ್ಕ ||
ಗಾಢದಿಂದಲಿವನ
ಹೆಡೆಮುಡಿಯ ಬಿಗಿದು ಕಟ್ಟಿ
ಒಡಿಹೋದರೆ ಸಿಕ್ಕ , ಕಿಡಿ-
ಗೇಡಿ ರಂಗನ ಬಿಡಬೇಡಿ , ಕಿಡಿ
ಗೇಡಿ ರಂಗನ ಬಿಡಬೇಡಿ ||
ಯಾರು ಇಲ್ಲದ ವೇಳೆ
ದಾರಿ ನೋಡುತ್ತಲಿವ
ಸೂರೆ ಮಾಡುವ ಹಾಲು ಮೊಸರು
ಚೋರ ರಂಗನ ಬಿಡಬೇಡಿರೆ
ಧೀರ ಕೃಷ್ಣನ ಬಿಡಬೇಡಿರೆ ||
ಗಂಡನಿಲ್ಲದ ವೇಳೆ ನೋಡಿ
ಭಂಡು ಮಾಡಿ ಸೀರೆ ಕದ್ದು-
ಕೊಂಡು ಹಾಲು ಕೆನೆಯ ಕದ್ದ
ಲಂಡ ರಂಗನ ಬಿಡಬೇಡಿರೆ
ಪುಂಡ ಕೃಷ್ಣನ ಬಿಡಬೇಡಿರೆ ||
ಕಾದುಕೊಂಡಿವ ಬಾಹೊ
ಹಾದಿಯ ನೋಡಿ ನಾ ದಣಿದೆ
ಆದುದೆಮ್ಮಯ ಕಾಮ ಸಾಧಿಸಿಕೊಂಬ
ಕ್ರೋಧ ಸಾಧಿಸಿಕೊಂಬ ||
ಒರಳಿಲಿ ಕಟ್ಟಿಸಿಕೊಂಡು
ಒರಳ ಕೊಂಡೋಡುವನಿಂಥ
ದುರುಳ ಕೃಷ್ಣನ ಬಿಡಬೇಡಿ
ಮರುಳ ಮಾಡಿ ಹೋದನಮ್ಮ
ಬಹು ಮೋಸ ಮಾಡಿ ಹೋದನಮ್ಮ ||
ಇಂದಿನ ದಿನ ಸುದಿನ
ಮಂದರಧರ ದೊರೆತ ಕಾರಣ
ತಂದೆ ಪುರಂದರ ವಿಠಲನ್ನ ಅಪ್ಪಿಕೊಂಬ
ಸಂತೋಷದಿಂದ ಅಪ್ಪಿಕೊಂಬ ||
***
pallavi
ikko navanItacOra sikkidanamma hemmakkaLellaru kUDi nammakkara dIrisikomba
caraNam 1
andu modalAgi namma mandiragaLella pokku tinda mIsala
beNNe tande mADi pOdanakka bahu tande mADi pOdanakka
caraNam 2
kADhadindalivana heDe muDiya bigidu kaTTi Odi hOdare
sikka kiDi gEDi rangana biDabEDi kiDi gEDi krSNana biDabEDi
caraNam 3
yAru illada vELeyali dAriya nODuttaliva sure mADuva
hAlu mosaru cOra rangana biDa bEDire dhIra krSNana biDa bEDire
caraNam 4
kaNDanillada vELe nODi bhaNDu mADi sIre kaddu koNdu hAlu
keneya kadda laNDa rangana biDa bEDire puNDa krSNana biDa bEDire
caraNam 5
kAdu koNDiva bAho hAdiya nODi nA daNide Adudemmeya
kAma sAdhisi komba krOdha sAdhisi komba
caraNam 6
oraLili kaTTisi koNDu oraLa koNDoDuvaninda maruLu mADi
hOdanamma bahu mOsa mADi hOdanamma duruLa krSNana biDa bEDi
caraNam 7
indina dina sudina mandaradhara toreda kAraNa tande
purandara viTTalanna appikomba santOSadinda appi komba
***
No comments:
Post a Comment