Monday 6 December 2021

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ನರಚಿತ್ತಕ್ಕೆ purandara vittala HARICHITTA SATYA NAMMA HARICHITTA SATYA NARACHITTAKKE







ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ ||ಪ||

ನರಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು||ಅ.ಪ||

ಸುದತಿ ಮಕ್ಕಳ ಭಾಗ್ಯ ಬಯಸೋದು ನರಚಿತ್ತ
ಮದುವ್ಯಾಗದಿರುವದು ಹರಿಚಿತ್ತವು
ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿಯಾಗೋದು ಹರಿಚಿತ್ತವಯ್ಯ ||೧||

ವಿಧವಿಧ ಯಾತ್ರೆಯ ಬಯಸೋದು ನರಚಿತ್ತ
ಒದಗಿ ಬರುವ ರೋಗ ಹರಿಚಿತ್ತವು
ಸದಾ ಅನ್ನದಾನವ  ಬಯಸೋದು ನರಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವಯ್ಯ ||೨||


ಧರಣಿಯನಾಳಬೇಕೆಂಬುದು ನರಚಿತ್ತ
ಪರರ ಸೇವಿಸುವುದು ಹರಿಚಿತ್ತವು
ಪುರಂದರವಿಠಲನ ಬಯಸೋದು ನರಚಿತ್ತ
ದುರಿತವ ಕಳೆವುದೆ ಹರಿಚಿತ್ತವಯ್ಯ||೩||
***

ರಾಗ ಪೂರ್ವಿಕಲ್ಯಾಣಿ. ಅಟ ತಾಳ (AUDIO RAGA MAYBE DIFFERENT)
PurviKalyani-Ata

ಹರಿಚಿತ್ತ ಸತ್ಯ ನಮ್ಮ ಹರಿಚಿತ್ತ ಸತ್ಯ
ನರ ಚಿತ್ತಕೆ ಬಂದದ್ದು ಲವಲೇಶ ನಡೆಯದು ||ಪ.||

ಮಡದಿ(ಸುದತಿ)ಮಕ್ಕಳ ಭಾಗ್ಯ ಬಯಸೋದು ನರ ಚಿತ್ತ
ಮದುವ್ಯಾಗದಿರುವುದು ಹರಿ ಚಿತ್ತವಯ್ಯ
ಕುದುರೆ ಅಂದಣ ಆನೆ ಬಯಸೋದು ನರ ಚಿತ್ತ
ಪದಚಾರಿಯಾಗೋದು ಹರಿಚಿತ್ತವಯ್ಯ ||೧||

ವಿಧ ವಿಧ ಯಾತ್ರೆಯ ಬಯಸೋದು ನರ ಚಿತ್ತ
ಒದಗಿ ಬರುವ ರೋಗ ಹರಿ ಚಿತ್ತವು
ಸದಾ ಅನ್ನದಾನವ ಬಯಸೋದು ನರ ಚಿತ್ತ
ಉದರಕ್ಕೆ ಅಳುವುದು ಹರಿಚಿತ್ತವಯ್ಯ ||೨||

ಧರಣಿಯನಾಳಬೇಕೆಂಬುದು ನರ ಚಿತ್ತ
ಪರರ ಸೇವಿಸುವುದು ಹರಿಚಿತ್ತವು
ಪುರಂದರ ವಿಠ್ಠಲನ ಬಯಸೋದು ನರ ಚಿತ್ತ
ದುರಿತವ ಕಳೆವುದು ಹರಿಚಿತ್ತವಯ್ಯ ||೩||
***

haricitta satya namma haricitta satya
nara cittake baMdaddu lavalEsha naDeyadu ||pa.||

maDadi(sudati)makkaLa bhAgya bayasOdu nara citta
maduvyAgadiruvudu hari cittavayya
kudure aMdaNa Ane bayasOdu nara citta
padacAriyAgOdu haricittavayya ||1||

vidha vidha yAtreya bayasOdu nara citta
odagi baruva rOga hari cittavu
sadA annadAnava bayasOdu nara citta
udarakke aLuvudu haricittavayya ||2||

dharaNiyanALabEkeMbudu nara citta
parara sEvisuvudu haricittavu
puraMdara viThThalana bayasOdu nara citta
duritava kaLevudu haricittavayya ||3||
***

pallavi

haricitta satya haricitta

anupallavi

naracittake bandaddu lavalEsha naDeyadu

caraNam 1

sudati makkaLa bhAgya bayasOdu nara citta maduvyAgadiruvudu hari cittavu
kudure andaNa Ane bayasOdu nara citta padacAriyAgOdu hari cittavayya

caraNam 2

vidha vidha yAtreya bayasOdu nara citta odagi baruva rOga hari cittavu
sadA anna dAnavu bayasOdu nara citta udharakke aLuvudu hari cittavayya

caraNam 3

dharaNiyanALa bEkembudu nara citta parara sEvisuvudu hari cittavu
puranadara viTTalana bayasOdu nara citta duritava kaLevude hari cittavayya
***

P: haricitta satya haricitta

A: naracittake bandaddu lavalEsha naDeyadu

C1: sudati makkaLa bhAgya bayasOdu nara citta maduvyAgadiruvudu hari cittavu
kudure andaNa Ane bayasOdu nara citta padacAriyAgOdu hari cittavayya

2: vidha vidha yAtreya bayasOdu nara citta odagi baruva rOga hari cittavu
sadA anna dAnavu bayasOdu nara citta udharakke aLuvudu hari cittavayya

3: dharaNiyanALa bEkembudu nara citta parara sEvisuvudu hari cittavu
puranadara viTTalana bayasOdu nara citta duritava kaLevude hari cittavayya
***
 

Meaning: What Hari wants is real (will happen)

A: Even an iota (lava lesha) of what a man (nara) wants (thinks) may not(will not) happen (naDeyadu)

C1: To expect to have children is a human want, but Hari may not let the marriage happen.

To expect horses and elephants is human, but Hari may want one to go on his feet(padachari).

C2:To expect various pilgrimages is human, but getting unwell (which prevent pilgrimages) is the wish of Hari. To expect someone to feed one is human, but whether one gets it or not is (determined) by Hari.

C3: To want to rule the whole world is human, but Hari will determine whether you serve others. To expect to serve Purandaravithala is human, but to get rid of  difficulties is Hari’s wish.
***

ಚಿತ್ತ ಸತ್ಯ,🙏ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು.
ಮಹಾಭಾರತದ ಕುರುಕ್ಷೇತ್ರ ಯುದ್ಧ ಭೂಮಿ. ಯುದ್ಧ ನಡೆಯುತ್ತಿದೆ  ಸಾವಿರಾರು ಸೈನ್ಯ, ರಥ, ಆನೆ, ಕುದುರೆಗಳು, ಓಡಾಟ, ಬಾಣಗಳ ಸುರಿಮಳೆ.
ಅಲ್ಲಿಯೇ ಇದ್ದ ಎತ್ತರದ ಧ್ವಜ ಸ್ಥಂಭ, ಮೇಲೊಂದು ಗರ್ಭಿಣಿ ಪಕ್ಷಿ ಕುಳಿತಿದೆ.
ಒಬ್ಬ ಸೈನಿಕ ಬಿಟ್ಟ ಬಾಣ ಪಕ್ಷಿಯ ಹೊಟ್ಟೆ ಸವರಿ ಹೋಯಿತು  ಹೊಟ್ಟೆ ಸೀಳಿ ಪಕ್ಷಿ ಬೀಳುವಾಗ ಆದರ ಹೊಟ್ಟೆ ಯಲ್ಲಿದ್ದ ನಾಲಕು ಮೊಟ್ಟೆಗಳು ದಟ್ಟವಾಗಿ ಬೆಳೆದ ಹುಲ್ಲಿನ ಮೇಲೆ ಬಿತ್ತು. ಯಾರ ಕಾಲ್ತುಳಿತಕ್ಕೂ ಸಿಗದಂತೆ, ಸೈನಿಕನ ಬಾಣದ ಗುರಿಗೊಳಗಾಗಿ ಆನೆಯ ಕೊರಳಿನ ಗಂಟೆ ಮುರಿದು ಆ ಮೊಟ್ಟೆಗಳ ಮೇಲೆ ಕವಚದಂತೆ ಬಿದ್ದು ಮೊಟ್ಟೆ ಸೇಫ್ ಆಗಿದ್ದು.
ಯುದ್ಧ ಮುಗಿಯಿತು. ಪಾಂಡವರಿಗೆ ಜಯ.
ಅದು ಸರಸ್ವತೀ ನದಿ ತೀರ,
ಋಷಿಗಳು ಸ್ನಾನಕ್ಕೆಂದು ಬಂದಾಗ ಚಿಲಿಪಿಲಿ ಶಬ್ದ ಕೇಳಿಸಿ ಹತ್ತಿರ ಹೋಗಿ ನೋಡಿದಾಗ ಮೊಟ್ಟೆಗಳು ಒಡೆದು ಪಕ್ಷಿಗಳು ಹೊರಬಂದಿದ್ದು. ಇದನ್ನೇ ಹರಿಯ ಸಂಕಲ್ಪ ಎನ್ನುವುದು. ಅಂತಹ ಭೀಕರ ಸಂದರ್ಭ ವಿದ್ದಾಗಲೂ ಮೊಟ್ಟೆಗಳು ಹಾಳಾಗದೆ ಉಳಿದದ್ದು ಹರಿಯ ಚಿತ್ತವಲ್ಲವೇ.
ಇನ್ನು ನರಚಿತ್ತ :
   ಹೆಸರಾಂತ ಗಣಿತಜ್ಞ ಭಾಸ್ಕರಾಚಾರ್ಯ ತನ್ನ ಮಗಳಾದ ಲೀಲಾವತಿಯ ಮದುವೆಗೆ ನಿರ್ಧಾರಿಸಿದಾಗ, ಅವಳ ಜಾತಕದಲ್ಲಿ ಮದುವೆಯ ಮರುಘಳಿಗೆ ವೈಧವ್ಯ ವಿರುರುತ್ತದೆ. ಅದನ್ನು ತಪ್ಪಿಸಲು ಶ್ರೇಷ್ಠ ಮುಹೂರ್ತ ನೋಡಿ ಅದರಂತೆ, ಘಳಿಗೆ ಬಟ್ಟಲನ್ನು ಇಟ್ಟು ಸರಿಯಾದ ಮುಹೂರ್ತಕ್ಕೆಅಕ್ಷತೆ ಏರ್ಪಡಿಸಿದ್ದು, ದೈವವಶಾತ್ ಘಳಿಗೆ ಬಟ್ಟಲಲ್ಲಿ ಹುಡುಗಿಯ ಓಲೆ ಬಿದ್ದು ಅದು ಬಟ್ಟಲಿಗೆ ಅಡ್ಡ ಕೂತು ಸಮಯದ ಅರಿವಾಗದೆ ಮದುವೆ ನಡೆದೇ ಹೋಗಿ, ಅವಳಿಗೆ ವೈಧವ್ಯ ಪ್ರಾಪ್ತಿಯಗುತ್ತದೆ. ಇದರಿಂದ ಹರಿಯ ಸಂಕಲ್ಪ ಬದಲಿಸಲು ಯಾರಿಂದಾಲೂ ಸಾಧ್ಯವಿಲ್ಲ ಎನ್ನುವ ಸತ್ಯ ಅರ್ಥವಾಗುತ್ತದೆ.
ಅದನ್ನೇ ಶ್ರೀ ಪುರಂದರ ದಾಸರು "ಹರಿ ಚಿತ್ತ ಸತ್ಯ, ನರ ಚಿತ್ತಕ್ಕೆ ಬಂದದ್ದು ಲವಲೇಶ ನಡೆಯದು " ಎಂದಿದ್ದಾರೆ. ಹರಿಯು ಸರ್ವ ಸ್ವತಂತ್ರ, ಪ್ರಾಕೃತ ಬಂಧವಿಲ್ಲದವನು, ಸರ್ವ ಶಕ್ತ, ಸರ್ವ ಸಮರ್ಥ ಆತನ ಸಂಕಲ್ಪವೇ ಸಂಕಲ್ಪ.
🙏ಹರೇ ಶ್ರೀ ಶ್ರೀನಿವಾಸ 🙏
***

No comments:

Post a Comment