Thursday, 5 December 2019

ಬಾಲ ಹನುಮ ಬರಲಿಲ್ಲವಮ್ಮ purandara vittala BAALA HANUMA BARALILLAVAMMA


ಬಾಲ ಹನುಮ ಬರಲಿಲ್ಲವಮ್ಮ
ಚಿಕ್ಕ ಬಾಲ ಹನುಮಗೆ ಏನಾಯಿತಮ್ಮ ||

ಶಂಕೆಯಿಲ್ಲದೆ ಲಂಕೆಗೆ ಹಾರಿ
ಢಂಕಿಸಿ ಕೈಕಾಲು ನೊಂದಿದ್ದಾವೇನ
ಸಾಕು ತಿರುಗಲಾರೆನೆಂದು ಕುಳಿತಿದ್ದಾನೇನ ||೧||

ಹಸಿದು ಬಂದ ಮುದ್ರಿಕೆ ತಂದ
ಹಸುಮಕ್ಕಳೂಟಕ್ಕೆ ಬರಲಿಲ್ಲವಮ್ಮ
ಅಸುರರ ವನಕ್ಹೋಗಿ ಹಣ್ಣು ಮೆಲ್ಲೆಂದರೆ
ಅಸುರರ ಕಂಡು ತಾ ಅಂಜಿದ್ದಾನೇನ ||೨||

ಆಕಾಶಮಾರ್ಗದಿ ರಾಮರ ನುಡಿ ಕೇಳಿ
ಭರದಿಂದಲಿ ಲಂಕಾಪುರನೇರಿದ
ಶ್ರೀರಾಮ ರಾವಣನ ಕೊಂದ ವಿಭೀಷಣ ಗೆದ್ದ
ಪುರಂದರ ವಿಠ್ಠಲ ತಾ ಮೆಚ್ಚಿದ್ದಾನೇನ ||೩||
***

baala hanuma baralillavamma
chikka baala hanumage Enaayitamma ||

shaMkeyillade laMkege haari
DhaMkisi kaikaalu noMdiddaavEna
saaku tirugalaareneMdu kuLitiddaanEna ||1||

hasidu baMda mudrike taMda
hasumakkaLUTakke baralillavamma
asurara vanak~hOgi haNNu melleMdare
asurara kaMDu taa aMjiddaanEna ||2||

aakaashamaargadi raamara nuDi kELi
bharadiMdali laMkaapuranErida
shrIraama raavaNana koMda vibhIShaNa gedda
puraMdara viThThala taa mecchiddaanEna ||3||
***



No comments:

Post a Comment