ಭಾರತೀಶ ಮದ್ಭಾರ ನಿನ್ನದಯ್ಯ ಕರುಣದಿ ಪಿಡಿ ಕೈಯ್ಯಾ
ಪೂರೈಸೆನ್ನ ಮನೋಭಿಲಾಷೆ ಗುರುವೆ ಭಜಕರ ಸುರತರುವೆದ್ಭ
ಹರಿಭಕ್ತಾಗ್ರೇಸರನೆ ಹನುಮಂತಾ ಹರನುತ ಬಲವಂತಾ
ತರಣಿಕುಲಜ ಶ್ರೀರಾಮನ ಕೈಯಿಂದ ಬಲುಸಂಭ್ರಮದಿಂದಾ
ಶರಧಿಯನು ದಾಂಟಿ ಸೀತಾಕೃತಿಯನ್ನ ನೋಡಿ
ರಣದೊಳಗೋಲ್ಯಾಡಿ
ದುರುಳ ರಕ್ಕಸರ ದುಷ್ಟ ದನುಜರ ತರಿದೆ ಲೋಕೈಕ ಸಮರ್ಥಾ ||1||
ಕುಂತಿ ಜಠರಾಂಭೋನಿಧಿ ಚಂದ್ರಮನೆ ರಾಜಾಗ್ರೇಸರನೆ
ಕಂತು ಜನತನಿಚ್ಛಾನುಸಾರವಾಗಿ ರಣದೊಳಗೆ ಚೆನ್ನಾಗಿ
ನಿಂತು ದುಷ್ಟ ದುರ್ಯೋಧನಾದಿಗಳನು ಸಂಹರಿಸಿದಿ ನೀನು
ಭ್ರಾಂತಿ ಮನ ಜರಿವರೇನು
ಬಲ್ಲರಯ್ಯ ಕರುಣದಿ ಪಿಡಿಯೊ ಕೈಯಾ ||2||
ನಡುಮನೆಯೆಂಬೊ ವಿಪ್ರನ ಮನೆಯಲ್ಲಿ ಅವತರಿಸಿ ಚೆನ್ನಾಗಿ
ಮೃಡ ಸರ್ವೋತ್ತಮ ಹರಿಯೆ ತಾನೆಂದು ಮಿಥ್ಯಾಜಗವೆಂದು
ನುಡಿವ ಜನರ ಮತಗಳನೆ ನಿರಾಕರಿಸಿ ಶಾಸ್ತ್ರವ ರಚಿಸಿ
ಒಡೆಯ ತಂದೆ ಶ್ರೀ ವಿಜಯವಿಠಲನ್ನ ಪೂಜಾಸಕ್ತನೇ ||3||
*********

No comments:
Post a Comment