Saturday, 4 December 2021

ಕಾವೇರಿ ಕಲುಪಾಪಹಾರಿ ಪಾವನ ಶರೀರೆ ಶುಭ ankita jagannatha vittala KAAVERI KALUPAAPAHAARI PAAVANA SHAREERE SHUBHA



ಜಗನ್ನಾಥದಾಸರು

.ಕಾವೇರಿ ಕಲುಪಾಪಹಾರಿ ಪಾವನ
ಶರೀರೆ ಶುಭತೋಷಕಾರಿ ||ಪ||

ಶ್ರೀ ವಾಸುದೇವ ರಂಗೇಶನಾಲಯಕೆ 
ನೀನಾವರಣಳಾಗಿಪ್ಪೆ ವಿರಜೆಯಂತೇ
ದೇವ ಋಷಿ ಗಂಧರ್ವ ಪಿತೃಪ ನರವರರಿಂದ
ಸೇವನೀಯಳಾಗಿ ಸರ್ವಾರ್ಥ ಪೂರೈಪೆ ||೧||

ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ
ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ
ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ
ಸಲಿಲಮಂದಿರೆ ನಿನ್ನ ಕರುಣಕೇನೆಂಬೆ ||೨||

ರವಿ ತುಲಾರಾಶಿಗೈದಿದ ಸಮಯದೊಳಗೊಂದು
ದಿವಸ ಮಜ್ಜನ ಗೈವ ಮಾನವರಿಗೆ
ಪವನಾಂತರಾತ್ಮಕನ ಪಾದಕಮಲವ ತೋರಿ
ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ ||೩||

ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ 
ಬಹು ರೂಪಗಳ ಧರಿಸಿಕೊಂಡ ಪರ ಮನು
ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ
ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು ||೪||

ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ
ಬೇಡಿಕೊಂಡೆನು ಹೃದಯ ನೀಡದೊಳಗೇ
ಗೂಢ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ
ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ  ||೫||
***

Kaveri kalupapahari pavana
sharire subhatosakari ||pa||

Sri vasudeva rangeshanalayake 
ninavaranalagippe virajeyante
deva rushi gandharva pitrupa naravararinda
sevaniyalagi sarvartha puraipe ||1||

Jalacharanveshana lubdha saligrama
tulasi vrukshavane kodisida matradi
kalusharashigalella kaledu muktiyanitte
salilamandire ninna karunakenembe ||2||

Ravi tularashigaidida samayadoḷagondu
divasa majjana gaiva manavarige
pavanantaratmakana padakamalava tori
bhavaja rogava kaledu bhagyavantara malpe ||3||

Sri pavana sivarinda ta pujegoluta 
bahu rupagala dharisikonda para manu
vyapisiha ninnoladyapi svargastha jana
ri podaviyolu tava samipadali janisuvaru ||4||

Mudhamati nanu kondada ballene ninna
bedikondenu hrudaya nidadolage
gudha pada shayana jagannatha vittalananghri
noduva saubhagya daya madu pratidinadalli ||5||
***

ಕಾವೇರಿ ಕಲುಪಾಪಹಾರಿ ಪಾವನ
ಶರೀರೆ ಶುಭತೋಷಕಾರಿ ಪ

ವಾಸುದೇವ ರಂಗೇಶನಾಲಯಕೆ ನೀ
ನಾವರಣಳಾಗಿಪ್ಪೆ ವಿರಜೆಯಂತೇ
ದೇವ ಋಷಿ ಗಂಧರ್ವ ಪಿತೃಪ ನರವರರಿಂದ
ಸೇವನೀಯಳಾಗಿ ಸರ್ವಾರ್ಥ ಪೂರೈಪೆ 1

ಜಲಚರಾನ್ವೇಷಣ ಲುಬ್ಧ ಸಾಲಿಗ್ರಾಮ
ತುಲಸಿ ವೃಕ್ಷವನೆ ಕೊಡಿಸಿದ ಮಾತ್ರದೀ
ಕಲುಷರಾಶಿಗಳೆಲ್ಲ ಕಳೆದು ಮುಕ್ತಿಯನಿತ್ತೆ
ಸಲಿಲಮಂದಿರೆ ನಿನ್ನ ಕರುಣಕೇನೆಂಬೆ 2

ರವಿ ತುಲಾರಾಶಿಗೈದಿದ ಸಮಯದೊಳಗೊಂದು
ಮಜ್ಜನ ಗೈವ ಮಾನವರಿಗೆ
ಪವನಾಂತರಾತ್ಮಕನ ಪಾದಕಮಲವ ತೋರಿ
ಭವಜ ರೋಗವ ಕಳೆದು ಭಾಗ್ಯವಂತರ ಮಾಳ್ಪೆ 3

ಶ್ರೀ ಪವನ ಶಿವರಿಂದ ತಾ ಪೂಜೆಗೊಳುತ ಬಹು
ಪರ ಮನು
ವ್ಯಾಪಿಸಿಹ ನಿನ್ನೊಳದ್ಯಾಪಿ ಸ್ವರ್ಗಸ್ಥ ಜನ
ರೀ ಪೊಡವಿಯೊಳು ತವ ಸಮೀಪದಲಿ ಜನಿಸುವರು 4

ಮೂಢಮತಿ ನಾನು ಕೊಂಡಾಡ ಬಲ್ಲೆನೆ ನಿನ್ನ
ಬೇಡಿಕೊಂಡೆನು ಹೃದಯ ನೀಡದೊಳಗೇ
ಗೂಡ ಪದ ಶಯನ ಜಗನ್ನಾಥ ವಿಠ್ಠಲನಂಘ್ರಿ
ನೋಡುವ ಸೌಭಾಗ್ಯ ದಯ ಮಾಡು ಪ್ರತಿದಿನದಲ್ಲಿ ಬ 5
*********

No comments:

Post a Comment