Thursday, 5 December 2019

ತುಂಗೆ ಮಂಗಳತರಂಗೆ ಹರಿಸರ್ವಾಂಗೇ purandara vittala

ರಾಗ ಭೂಪಾಳಿ ಝಂಪೆ ತಾಳ)

ತುಂಗೆ ಮಂಗಳತರಂಗೆ ||ಪ||
ಹರಿಯ ಸರ್ವಾಂಗೆ ಜಯ ಜಯತು ಜಯ ತುಂಗಭದ್ರೆ ||ಅ||

ಆದಿಯೊಲ್ಲೊಬ್ಬ ದೈತ್ಯ ಮೇದಿನಿಯ ಕದ್ದೊಯ್ದು
ಸಾಧಿಸುತ್ತಿರಲವನ ಬೆನ್ನಟ್ಟಿ ಬಿಡದೆ
ಛೇದಿಸುತಲವನ ಭೂಮಿಯನೆತ್ತಿ ಕಾಯ್ದಂಥ
ಆದಿ ವರಾಹನ ದಾಡೆಗಳಿಂದ ಬಂದೆ ||

ಜಲವೆಲ್ಲ ಹರಿಮಯ ಶಿಲೆಯೆಲ್ಲ ಶಿವಮಯ
ಮಳಲು ಮಿಟ್ಟೆಗಳೆಲ್ಲ ಮಣಿಯ ಮಯವು
ಬೆಳದಿಪ್ಪ ದರ್ಭೆಗಳು ಸಾಕ್ಷಾತ್ತು ಬ್ರಹ್ಮಮಯ
ನಳಿನನಾಳವು ಸರ್ವ ವಿಷ್ಣುಮಯವು ||

ಇದೇ ವೃಂದಾವನ ಇದೇ ಕ್ಷೀರಾಂಬುಧಿ
ಇದೇ ವೈಕುಂಠಕೆ ಸರಿಯೆಂದೆನಿಸಿದೆ
ಇದೇ ಬದರಿಕಾಶ್ರಮ ಇದೇ ವಾರಣಾಸಿಗೆ
ಅಧಿಕ ಫಲವನ್ನೀವ ದೇವಿ ||

ಧರೆಗೆ ದಕ್ಷಿಣ ವಾರಣಾಸಿಯೆಂದೆನಿಸಿದೆ
ಪರಮ ಪವಿತ್ರೆ ಪಾವನಚರಿತೆ ನಿನ್ನ
ಸ್ಮರಣೆ ಮಾತ್ರದಿ ಕೋಟಿ ಜನ್ಮದಘವನು ಕಳೆವ
ಪರಿದು ಸಾಯುಜ್ಯಫಲವೀವ ದೇವಿ ||

ಪರಮಭಕ್ತ ಪ್ರಹ್ಲಾದಗೊಲಿದು ಬಂದು
ನರಸಿಂಹ ಕ್ಷೇತ್ರವೆಂದೆನಿಸಿ ಮೆರೆದೆ
ಧರೆಯೊಳಧಿಕ ವರ ಕೂಡಲೀಪುರದಲ್ಲಿ
ವರದಪುರಂದರವಿಟ್ಠಲನಿರಲು ಬಂದೆ ||
***

pallavi

tunge mangaLa tarange

anupallavi

hariya sarvAnge jaya jayatu jaya tungabhadre

caraNam 1

AdiyollAbba daitya mEdiniya kaddoidu sAdhisuttiralavana bennaTTi biDade
chEdisutalavana bhUmiyanetti kAidantha Adi varAhana tADegaLinda bande

caraNam 2

jalavella harimaya shileyella shivamaya manalu miTTegaLella maNiya mayavu
beLadippa darbhegaLu sAkSAttu brahmamaya naLinanALavu sarva viSNumayavu

caraNam 3

idE vrndAvana idE kSIrAmbudhi idE vaikuNthake sariyendeniside
idE badarikAshrama idE vArANasige adhika balavannIva dEvi

caraNam 4

dharege dakSINa vArANasiyendeniside parama pavitre pAvana carite ninna
smaraNe mAtradi kOTi janmadaghavanu kaLeva paridu sAyujya palavIva dEvi

caraNam 5

parama bhakta prahlAdagolidu bandu narasimha kSEtravendenisi merede
dhareyoLadhika vara kUDalIpuradalli varada purandara viTTalaniralu bande
***

ತುಂಗೆ ಮಂಗಳತರಂಗೆ-ಹರಿಸರ್ವಾಂಗೇ |
ಜಯಜಯ ಜಯತು ತುಂಗೆ ಪ

ಆದಿಯಲೊಬ್ಬ ದೈತ್ಯ ಮೇದಿನಿಯಕದ್ದೊಯ್ದ |ಸಾಧಿಸಿ ರಸಾತಳದಲ್ಲಿರಿಸೆ ||ಭೇದಿಸಿದವನ ನಾಸಿಕದಲ್ಲಿ ಪುಟ್ಟಿದೆ |ಆದಿವರಾಹನ ದಾಡೆಯಲಿ ಬಂದೆ ದೇವಿ 1

ಜಲವೆಲ್ಲ ಹರಿಮಯ, ಶಿಲೆಯೆಲ್ಲ ಶಿವಮಯ |ಮಳಲುಮಿಟ್ಟೆಗಳೆಲ್ಲ ಮುನಿಮಯವು ||ಬೆಳೆದ ದರ್ಭೆಗಳು ಸಾಕ್ಷಾತು ಬ್ರಹ್ಮಮಯ |ನಳಿನನಾಳವು ಸರ್ವ ವಿಷ್ಣುಮಯ 2

ಇದೆ ವೃಂಧಾವನ, ಇದೆಕ್ಷೀರಾಂಬುಧಿ|ಇದೆ ವೈಕುಂಠಕೆ ಸರಿಮಿಗಿಲೆನಿಸಿದೆ ||ಇದೆ ಬದರಿಕಾಶ್ರಮ, ಇದೆ ವಾರಣಾಸಿಗೆ,ಅಧಿಕವೆಂದೆನಿಸಿದೆ ದೇವಿ ತುಂಗೆ 3

ಧರೆಗೆ ದಕ್ಷಿಣವಾರಣಾಸಿಯೆಂದೆನಿಸಿದೆ |ಪರಮಪವಿತ್ರ ಪಾವನ ಚರಿತ್ರೆಯು ನಿನ್ನ ||ಸ್ಮರಣೆಮಾತ್ರದಿ ಕೋಟಿ ಜನ್ಮದಘವನಳಿವ |ಪರಮಸಾಯುಜ್ಯದ ಫಲವೀವ ದೇವಿ4

ಪರಮಭಕ್ತ ಪ್ರಹ್ಲಾದಗೊಲಿದು ಬಂದ |ಪರಮನರಸಿಂಹಕ್ಚೇತ್ರವೆಂದೆನಿಸಿ ಮೆರೆದೆ ||ಧರೆಯೊಳಧಿಕವಾದ ಕೂಡಲಿ ಪುರದಲಿ |ವರದಪುರಂದರವಿಠಲನಿರಲು ಬಂದೆ5
******

No comments:

Post a Comment