ರಾಗ ಕಲ್ಯಾಣಿ ಅಟತಾಳ
ಹೇಳಬಾರದೆ ಬುದ್ಧಿಯ, ನಿನ್ನ ಮಗನ
ಊರುಗೂಳಿಯ ಮಾಡಿದೇವೆ ||ಪ||
ಹೇಳಬಾರದೆ ಬುದ್ಧಿಯ, ನಿನ್ನ ಮಗನ
ಊರುಗೂಳಿಯ ಮಾಡಿದೇವೆ ||ಪ||
ಓಣೋಣಿಗುಂಟೆ ವಾರಿಗೆಯರ ಕೂಡಿ
ಗೋವಳೇರ ಕೇರಿ ಹಾಳು ಮಾಡುತಿದ್ದಾನೆ ||ಅ||
ಅಟ್ಟದ ಮೇಲಿಟ್ಟ ಚಿಟ್ಟೆಗೆ ಹಾಲಲಿ
ಬೊಟ್ಟನಿಕ್ಕಿ ಚೀಪುವ
ದುಷ್ಟತನ ಮಾಡಬೇಡವಯ್ಯ ಎನ್ನೆ
ಕಷ್ಟವೇನೆನುತಲಿ ಮುದ್ದಿಟ್ಟು ಓಡಿದ ||
ಮೊಸರ ಶೋಧಿಸುತಿರಲು ಬಂದು
ಕುಳಿತ ಹಸುಗೂಸು ಎನುತಿದ್ದೇನೆ
ಕುಸುಮನಾಭ ತನ್ನ ವಶವಾಗು ಎನುತಲಿ
ಮುಸುಕು ತೆಗೆದು ಕುಚ ಹಿಚಿಕಿ ಪೋದನಲ್ಲೆ ||
ಬೆಣ್ಣೆಯ ಕಂಡರಂತು ಅದರ ರೂಪ
ಕಣ್ಣಿಗೆ ತೋರನಲ್ಲ
ಸಣ್ಣವನೆಂದು ನಾ ಬಾರೆಂದು ಕರೆದರೆ
ಬಣ್ಣಿಸಿ ಮಾತಾಡಿ ಬಾರೆಂದು ಕರೆದನೆ ||
ಉಡುವ ಸೀರೆಯ ಕಳೆದು ತಡಿಯಲ್ಲಿಟ್ಟು
ಮಡುವಿನೊಳು ಮೈ ತೊಳೆಯ
ಧಡಧಡ ಬಂದೊಯ್ದು ಕಡಹದ ಮರವೇರಿ
ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ ||
ಎಷ್ಟು ಹೇಳಲಿ ಯಶೋದೆ ನಿನಗೆ ಒಂ-
ದಿಷ್ಟು ಕರುಣವಿಲ್ಲವೇನೆ
ಸೃಷ್ಟಿಗೊಡೆಯ ನಮ್ಮ ಪುರಂದರವಿಠಲನ್ನ
ಎಷ್ಟು ಹೇಳಲಿ ಇನ್ನು ಆದ್ದಷ್ಟು ನಿನ್ನ ಮುಂದೆ ||
***

pallavi
hELabArade buddhiya ninna magana UrugoLiya mADidEve
anupallavi
ONONiguNTe vArigeyara kUDi gOvaLEra kEri hALu mADutiddAne
caraNam 1
aTTada mEliTTa cettige hAlali boTTanikki cIvuva duSTatana
mADa bEDavayya enne kaSTavEnenutali muddiTTu Odida
caraNam 2
mosara shOdisutiralu bandu kuLita hasugUsu enutiddene
kusumanAbha tanna vashavAgu enutali musuku tegedu kuca hiciki pOdanalle
caraNam 3
beNNeya kaNDarandu udhara rUpa kaNNige tOranalla
saNNavanendu nA bArendu karedare baNNisi mAtADi bArendu karedane
caraNam 4
uDuva sIreya kaLedu taDiyalliTTu maDuvinoLu mai toLeya thaDa thaDa
bandoidu kaDahada maravEri koDu krSNa enutire piDi jODu kaiyemba
caraNam 5
eSTu hELali yashOde ninage ondiSTu karuNavillavEne shrSTi koDeya
namma purandara viTTalanna eSTu hELali innu addaSTu nina munde
***
ಹೇಳಬಾರದೆ ಬುದ್ಧಿಯ - ಮಗನ ಊರ-|ಗೂಳಿಯ ಮಾಡಿದೆನೆ ? ಪ
ಮೇಳದಿ ಓರಗೆಯವರ ಕೂಡಿಕೊಂಡು |ಹಾಳು ಮಾಡುತಾನೆ ಗೋವಳಗೇರಿಯ ಅ.ಪ
ಅಟ್ಟದ ಮೇಲಿಟ್ಟಹ - ಚೆಟ್ಟಿಗೆ ಹಾಲು |ಬಟ್ಟನಿಕ್ಕಿ ಚೀಪುವ ||ದುಷ್ಟತನವ ಮಾಡಬೇಡ ಅಯ್ಯಾ ಎನೆ |ಕಷ್ಟವೇನೆಂಬೆ ಮುದ್ದಿಟ್ಟು ಓಡಿ ಪೋದ 1
ಮೊಸರ ಮಥಿಸುತಿರಲು - ಬಂದು ಕುಳಿತ |ಹಸುಗೂಸು ಎನುತಿದ್ದೆನೆ ||ಕುಸುಮನಾಭನು ತನ್ನ ವಶವಾಗು ಎನುತಲಿ |ವಸನೆತೆಗೆದು ಮೊಲೆ ಪಿಡಿದು ಹೋದ ಮೇಲೆ 2
ಬೆಣ್ಣೆಯ ಕಂಡರಂತೂ - ಅದರರೂಪ |ಕಣ್ಣಿಗೆ ತೋರನಲೆ ||ಸಣ್ಣವನೆಂದು ಬಗೆದು ನಾ ಕರೆದರೆ |ಬಣ್ಣದ ಮಾತಾಡಿ ಬಾ ಎಂದು ಕರೆವನು 3
ಉಡುವ ಸೀರೆಯ ಕಳೆದು - ತಡಿಯಲಿಟ್ಟು |ಮಡುವಿನೊಳ್ ಮೈದೊಳೆಯೆ ||ದಡದಡ ಬಂದೊಯ್ದು ಕಡಹದ ಮರವೇರಿ |ಕೊಡು ಕೃಷ್ಣ ಎನುತಿರೆ ಪಿಡಿ ಜೋಡು ಕೈಯೆಂಬ 4
ಎಷ್ಟು ಹೇಳಲಿ ನಿನಗೆ - ಯಶೋದೆ ಒಂ-|ದಿಷ್ಟು ಕರುಣವಿಲ್ಲವೆ |ಸೃಷ್ಟಿಗೊಡೆಯ ನಮ್ಮಪುರಂದರವಿಠಲ೫
*******

No comments:
Post a Comment