Saturday, 16 November 2019

ರೂಹ ಹೇಳುವೆ ಕೃಷ್ಣನ ಕೃಪೆಯಲ್ಲಿ ankita prasannavenkata

by ಪ್ರಸನ್ನವೆಂಕಟದಾಸರು
ರೂಹ ಹೇಳುವೆ ಕೃಷ್ಣನ ಕೃಪೆಯಲ್ಲಿನವೀನ ಜನನ ಮೃತ್ಯು ಭಯವೆಲ್ಲಿ ಪ.

ಕುಶತಲ್ಪ ತಂತ್ರಸಾರಾರ್ಚನೆಯೆತ್ತಖಳಪ್ರಸರದ ಗೊಂದಣದಾರಿಯೆತ್ತಹೊಸಮಲ್ಲಿಗೆಯ ಹಾರ ಸುರಭ್ಯೆತ್ತ ಮಲಕಶ್ಮಲರತ ಗ್ರಾಮಸೂಕರೆತ್ತ 1

ಚಕ್ರಪಾಣಿ ಒಲುಮೆ ವಿರತರಿಗುಂಟುಕರ್ತವಿಕ್ರಮವಾದಶೀಲಗೆ ಮತ್ತ್ಯೆಲ್ಲುಂಟುತಕ್ರಭಿನ್ನ್ವಾದರೆ ಹಾಲ ಹೋಲಲಿಲ್ಲ ಭಕ್ತಿವಕ್ರನೆಂದೆಂದಿಗೆ ಭಾಗವತನಲ್ಲ 2

ಡಂಬರ ಶ್ರದ್ಧೆಗೆಹರಿಮೆಚ್ಚಲಿಲ್ಲ ಸಲೆಡೊಂಬ ರಾಷ್ಟ್ರ ತಿರುಗೆ ಭೂ ಪ್ರದಕ್ಷಿಣೆಯಲ್ಲಅಂಬುಜಾಕ್ಷನನ್ನು ನಂಬದವ ಕ್ಷುಲ್ಲ ಗತಅಂಬಕನ ನೋಟ ಬದಿಯ ಧನದಲಿಲ್ಲ 3

ಇಂದಿರೇಶಮಹಿಮೆ ಮತಿಮಂದಗೇನು ದೀಪಹೊಂದಟ್ಟೆ ಭೋಜನಸುಖ ಶ್ವಾನಗೇನುಎಂದೂ ಸಾಧುಸಂಗಸೌಖ್ಯ ಕುಹಕಗಿಲ್ಲ ಕೆಚ್ಚಲೊಂದಿದ ಉಣ್ಣೆಗೆ ಕ್ಷೀರಸ್ವಾದವಿಲ್ಲ 4

ಪೂರ್ವಕೃತಪುಣ್ಯ ಒದಗದೆಂದಿಗಿಲ್ಲ ಯತಿಸರ್ವಜÕರಾಯನ ಮತ ಸುಲಭವಲ್ಲಉರ್ವಿಯೊಳು ಸಮೀರಮತಸ್ಥರಕಾವತಂದೆಸರ್ವೇಶ ಪ್ರಸನ್ನವೆಂಕಟಾಧಿದೇವ 5
*******

No comments:

Post a Comment