Sunday, 17 November 2019

ಶ್ರೀಮಂಗಳ ದೇವಿಗೆ ಜಯ ಜಯಶ್ರೀ ankita prasannavenkata

by ಪ್ರಸನ್ನವೆಂಕಟದಾಸರು
ಶ್ರೀ ಮಂಗಳ ದೇವಿಗೆ ಜಯ ಜಯಶ್ರೀ ಮಂಗಳ ದೇವಿಗೆ ಜಯ ಜಯಸ್ವಾಮಿಗೆ ಜಯ ಸ್ವಾಮಿನಿಗೆ ಜಯ ಜಯವೆಂದು ಪಾಡಿ ಜಾನಕಿರಾಮಗಾರತಿಯ ಬೆಳಗಿರೆ ಪ.

ಪದುಮಿಣಿಯರು ಪತಿವ್ರÀ್ರತಾಮಣಿಯರುವಿಧುಬಿಂಬದ ಮುಖಿಯರು ಸಖಿಯರುಪದುಮರಾಗದ ಹರಿವಾಣದಿ ಹರಿವಾಣದಿ ಹರಿಮಣಿದೀಪದಕದÀಡಿನಾರತಿಯ ಬೆಳಗಿರೆ 1

ಉಲಿವಂದುಗೆಗಾಲಿನ ಮೇಲಿನಕಲಧೌತದ ಇತ್ತರದುತ್ತರಿಥಳಥಳಿಸುವ ಶಶಿರವಿ ಕೋಟಿಗಳ ಕೋಟಿಗಳಗೆಲುವ ರವಿಕುಲ ತಿಲಕಗಾರತಿಯ ಬೆಳಗಿರೆ 2

ಅಂಗದವಲಯಾಂಗುಲಿಮುದ್ರಿಕೆರಂಗುಮಾಣಿಕ ಮುತ್ತಿನ ಸರಬಂಗಾರದ ಮೇಲೆವೈಜಯಂತಿವೈಜಯಂತಿ ಪದಕವು ತುಳಸಿಶೃಂಗಾರಗಾರತಿಯ ಬೆಳಗಿರೆ 3

ಇಂದಿರೆಸೀತಾರ್ಪಿತಮಾಲಾಕಂಧರಭುವನಾವಳಿಗಪ್ರತಿಸುಂದರ ಸದ್ಗುಣಸಾಂದ್ರಉಪೇಂದ್ರ ಭೂಮಿಜೆÉೀಂದ್ರÀ ಲಕ್ಷ್ಮಣಾಗ್ರಜ ರಾಮ ಚಂದ್ರಗಾರತಿಯ ಬೆಳಗಿರೆ 4

ಕುಂಡಲಮುಕುಟಾಂಕಿತ ಸನ್ಮುಖ ಸುಭ್ರೂಹಿತಮಂಡಲ ಗಂಡದಪುಂಡರೀಕಾಭಾನಯನದ ನಯನದ ಘನಶಾಮಲವರಕೋದಂಡಗಾರತಿಯ ಬೆಳಗಿರೆ 5

ಋಷಿಮಖವನು ಈಕ್ಷಿಸಿ ರಕ್ಷಿಸಿವಿಷಕಂಠನ ಧನುವ ಮುರಿಹೊಯಿದು ಮುರಿಹೊಯಿದುತುಷಿಸಿದಗಾರತಿಯ ಬೆಳಗಿರೆ 6

ಹನುಮನ ಕಂಠದ ಸನ್ಮಣಿಗೆಪಣೆಗಣ್ಣನ ಶ್ರೀ ಜಪಮಣಿಗೆನೆನೆವರ ಚಿಂತಾಮಣಿ ಸೀತಾಶಿರೋಮಣಿಗೆ ಶಿರೋಮಣಿಗೆಪ್ರಸನ್ನವೆಂಕಟ ವನಜೋದ್ಭವಪಿತಗಾರತಿಯ ಬೆಳಗಿರೆ 7
*******

No comments:

Post a Comment