Monday 18 November 2019

ಸ್ಥಿರವಲ್ಲೀಕಾಯಸ್ಥಿರವಲ್ಲ ಹೀಗರಿವಿದ್ದು ankita prasannavenkata

by ಪ್ರಸನ್ನವೆಂಕಟದಾಸರು
ಸ್ಥಿರವಲ್ಲೀಕಾಯಸ್ಥಿರವಲ್ಲ ಹೀಗರಿವಿದ್ದು ಹರಿಪಾದ ಮರೆವರೆ ಪ್ರಾಣಿ ಪ.

ಅಟ್ಟಡಿಗೆಎರವುಉಟ್ಟುಡುಗೆಎರವುಇಟ್ಟರೆ ಸಂತತಿಸಿರಿಎರವುಕಟ್ಟೊಡೆದು ಬೆಮರಿಡಿಸಿ ಜವನವರೊಯ್ಯೆಇಟ್ಟಿರುವ ಧಾನ್ಯ ಧನವೆಲ್ಲೊ ಪ್ರಾಣಿ 1

ಕೃಪಣತೆಯೊಳಗಿನ ನಿಪುಣತೆ ಬಾರದುಸ್ವಪನ ಸುಖ ಭೋಗಕೆ ಬಾರದುವಿಪಿನದಹನ ಮೃಗದಂತಾಪ್ತರು ಬರರುನೃಪನಾರಾಧನೆ ಫಲವು ಸ್ಥಿರವೆಲೊ ಪ್ರಾಣಿ 2

ಹರಿಕೊಟ್ಟಾಗಲೆ ಧರ್ಮ ದೊರಕಿಸಬೇಕುಸರಕಿದ್ದು ತಿರುಕಬುದ್ಧಿಯನು ಬಿಡುಅರಿವುಳ್ಳವರ ಕೂಡಿ ಕೋಟೆಜತನಮಾಡುಮರುಗಲಿ ಬೇಡ ಮುತ್ತಿಗೆ ಬಂತು ಪ್ರಾಣಿ 3

ಹವಳ ಮುತ್ತಿನಂಥ ಅವಳಿ ಮಕ್ಕಳ ನಂಬಿಕುವಲಯೇಶನ ಪ್ರಿಯಕುಲೇಶನ ಪುರದಲವಲವಿಕೆಯಲಿ ನಿರಯವಾರ್ತೆ ಜರೆವರೆ ತನ್ನವಳೆ ತನಗೆ ಓಕರಿಸುವಳೊ ಪ್ರಾಣಿ 4

ಫಣಿತಲ್ಪಗೊಪ್ಪಿಸಿ ಹಣ ತೃಣ ಮಾಡದಹೆಣ ತನ್ನ ತಾನೆ ಹೊಗಳಿಕೊಂಡರೆಎನಿತುಕಾಲಕೆ ಮೆಚ್ಚ ಪ್ರಸನ್ವೆಂಕಟಪತಿಘನತಪ್ಪ ಕಾಯೆ ತನ್ನವರನು ಪ್ರಾಣಿ5
********

No comments:

Post a Comment