Friday, 8 November 2019

ಎಂಥ ಬಾಲಕೃಷ್ಣ ಗೋಪೇರಂತಃಚೋರಾನಂತನೆ ankita prasannavenkata

by ಪ್ರಸನ್ನವೆಂಕಟದಾಸರು
ಎಂಥ ಬಾಲಕೃಷ್ಣ ಗೋಪೇರಂತಃಚೋರಾನಂತನೆಕಂತುಪಿತ ಕೋಟಿ ಕಾಂತಿಯಲ್ಲಿ ಭ್ರಾಂತ ಮಾಡಿದನಿವ ಪ.

ಬಾಲನಾದರೊಳಿತು ಒಳ್ಳೆ ಬಾಲೆಯರಮೊಳೆಮೊಲೆಗಾಲದ ಹಣ್ಣೆಂದು ನಖದಲಿ ಸೀಳಿ ನೋಡುವರೆಹೇಳಲೇನೆಂತೆನ್ನ ನಳಿತೋಳಲಪ್ಪಿ ತೊಂಡೆಹಣ್ಣಿಗ್ಹೋಲುವದೆಂದಧರನುಂಡ ತಾಳಬಹುದೇನಮ್ಮ 1

ನಿಚ್ಚಟಮೈಯೊಳು ನಾವುನಿಚ್ಚಮೈಯ ತೊಳೆಯುವಾಗಬಚ್ಚಲೊಳು ಬಂದು ಕಣ್ಣಮುಚ್ಚಿ ಅಟ್ಟಹಾಸದಿಸಚ್ಚಿದಾನಂದಗೋಪಾಲ ವಚ್ಚೆರೆಗಂಗಳೆಯರಹುಚ್ಚುಮಾಡಿ ಹೋದನಿವನ ನೆಚ್ಚಬಹುದೇನಮ್ಮ 2

ಹತ್ತಿಲಿದ್ದ ಸುಪ್ತ್ತಪುರುಷನ್ನೊತ್ತಿ ರತಿಕಳೆದೋರಿಚಿತ್ತ ಸೂರೆಗೊಂಬುದಾವ ಕೃತ್ಯವಮ್ಮ ರಂಗಗೆಸುತ್ತಿನವರರಿಯರೆಂದು ಚಿತ್ತವಾಯಿತಲ್ಲದೆಅತ್ತೆ ಮಾವ ಕಂಡರೆಮ್ಮ ತೊತ್ತು ಮಾಡಿ ಬಡಿವರೆ 3

ಹಟನೆಂದು ಬಾಯೊಳು ಬಾಯಿಟ್ಟು ಮುದ್ದನಿಡಲುಬಟ್ಟಕುಚವಿಡಿದೆಮ್ಮ ರಟ್ಟು ಮಾಡಬಹುದೆದಿಟ್ಟ ಜಾರನಿಗೆ ಕೈಯ ಕಟ್ಟುವೆವೆಂದರೆ ಚೆಲ್ವಬಟ್ಟಗಲ್ಲ ಕಚ್ಚಿ ಕ್ಷತವಿಟ್ಟೋಡಿದ ನಮ್ಮಯ್ಯ 4

ಚಿನ್ನನಾದರೇನು ಚೊಕ್ಕ ಚಿನ್ನದಂಥ ಗುಣವುಳ್ಳಚೆನ್ನಿಗನ ರೂಪಕೊಲಿದ ಕನ್ಯೆಯರು ಪೂರ್ವದಪುಣ್ಯವಂತರಲ್ಲದುಳಿದಿನ್ನಾರಿಗೆಲ್ಲಿ ಎಂದೂ ಪ್ರಸನ್ವೆಂಕಟೇಶ ಸಿಕ್ಕ ಇನ್ನು ಸುಖ ದಕ್ಕೀತೆ 5
********

No comments:

Post a Comment