Friday, 15 November 2019

ಮನವೆ ಮಾಧವನ ಮರೆಯದಿರೆಂದೆ ankita prasannavenkata

by ಪ್ರಸನ್ನವೆಂಕಟದಾಸರು
ಮನವೆ ಮಾಧವನ ಮರೆಯದಿರೆಂದೆ ದಣುವಾಯಿತು ಹಿಂದೆಕ್ಷಣವೊಂದು ಬಿಡದಿರು ಕೃಷ್ಣನ ಮುಂದೆ ಪ.

ಘನವಿಷಯಂಗಳ ನೆನವಿಲಿ ಪುನ:ಪುನ:ತನುವ ವಹಿಸಿಭವವನವನ ಚರಿಸದೆಅ.ಪ.

ಹರಿವಾರ್ತೆಯನು ಕೇಳು ಕೇಳಿದ್ದೆ ಕೇಳು ಅರಿಅರುವರನಾಳುಅರಿವಿಂದ ಗರುವದ ಮೂಲವ ಕೀಳುಹೆರವರ ಹರಟೆಗೆ ಪರವಶನಾಗದೆಕರಿವರವರದನ ವರವನೆ ಬಯಸು 1

ಹರಿಗುರುವಿಗೆರಗು ಅರಿತರಿತೆರಗು ತಪವೆರಡಲಿ ಸೊರಗುಸೊರಗಿದವರ ಕಂಡು ಕರಗು ಮರುಗುತಿರುಗ್ಯೊಡಲುರಿಗೆ ಮುಳ್ಳ್ಹೊರೆಗೆ ಸ್ಮರಾಸ್ತ್ತ್ರಕೆಗುರಿಯಾಗದೆ ಹರಿಸೆರಗ ಬಿಡದಿರು 2

ಹರಿವಿಗ್ರಹನೋಡುನೋಡಿದ್ದೆನೋಡುಮಮಕಾರವೀಡಾಡುಸ್ಥಿರವೊಂದನೆ ಬೇಡಸ್ಥಿರವ ಬಿಸಾಡುಸಿರಿವಂತರಸಿರಿಪರವಧುಗಳ ಸಿಂಗರವೆಣಿಸದೆ ಸಿರಿವರನ್ನೆನೋಡು3

ಹರಿಪ್ರಸಾದವನುಣ್ಣು ನೆನೆನೆನೆದುಣ್ಣು ಶ್ರೀಹರಿ ಪ್ರೀತ್ಯೆನ್ನುಹರಿಪ್ರೇರಕ ನೇಮಕ ಸಾಕ್ಷಿಕನೆನ್ನುಹರಿಪ್ರಿಯವಲ್ಲದನರುಪಿತ ಪರಿಪರಿಚರುಪವ ಚರಿಸದೆ ಹರಿಯಚರಿಸು4

ಹರಿಯಂಘ್ರಿ ಪರಾಗವ ಗ್ರ್ರಹಿಸಾಘ್ರಾಣಿಸು ಹರಿಯವರಿಗೆ ಉಣಿಸುಹರಿಭಕ್ತಿ ಜ್ಞಾನ ವೈರಾಗ್ಯವ ಗಳಿಸುಹರಿಪ್ರಿಯ ಪ್ರಭು ಮಧ್ವಾಚಾರ್ಯರ ಪ್ರಿಯ ಮೇಲ್ಗಿರಿ ಪ್ರಸನ್ವೆಂಕಟ ದೊರೆಯನೆ ನಂಬು 5
*******

No comments:

Post a Comment