Saturday, 16 November 2019

ವೃಂದಾರಕವಂದ್ಯ ಯದುಕುಲಾಂಬುಧಿ ankita prasannavenkata

by ಪ್ರಸನ್ನವೆಂಕಟದಾಸರು
ವೃಂದಾರಕವಂದ್ಯ ಯದುಕುಲಾಂಬುಧಿ ಚಂದ್ರ ಪ.

ಮೃಗಮದತಿಲಕ ವಿರಾಜಿತ ಖಳಶೂಲಮೃಗನರ ರೂಪಧೃತ ಸುಗುಣ ವಿಶಾಲ 1

ಖಗಾಸನ ಕಮಲಾರಮಣ ಕಲಿನಾಶಖಗಮುಕ್ತಿದಾಯಕ ಕನಕನಗೇಶ 2

ಮಣಿಮಯ ಭೂಷಣಾಮಿತಭೃತ್ಯಚಿಂತಾಮಣಿಕಲ್ಪಕುಜಧೇನುಮಹಿಮಾನಂತ3

ಸ್ವಾಮಿಪುಷ್ಕರವರಸನ್ನಿದಸದನಸ್ವಾಮಿವರಾಹಹಿರಣ್ಯಾಂಬಕಮಥನ4

ರಾಕೇಂದುಕೋಟಿ ಪ್ರಕಾಶಕಲುಷನಿರಾಕೃತ ನಮೊ ಪ್ರಸನ್ವೆಂಕಟೇಶ 5
*******

No comments:

Post a Comment