Saturday 16 November 2019

ರಾಘವನಾಡಿದ ಮಾತಿಗಾಂಜನೇಯ ankita prasannavenkata

by ಪ್ರಾಣೇಶದಾಸರು
ರಾಘವನಾಡಿದ ಮಾತಿಗಾಂಜನೇಯ ಬಿನ್ನವಿಸುವದು |ಈಗ ಪೇಳುವೆ ಸಜ್ಜನರಾಲಿಸುವದು ಪ

ಆ ರವಿನಂದನನು ತಾ ಮೇರೆ ಮಾಡಿ ಅಟ್ಟಿದನು |ವಾನರರುಗಳನು ತಿಂಗಳು ಮೀರಿತಿಂದಿಗೆ ||ಮಾರುತಿ ಕೇಳೀ ಮಾತು ಇನ್ನಾರ ಕಾಣೆ ಬಲ್ಲಿದರ |ನಾರಿಯೆಲ್ಲಿಹಳೋ ವಾರ್ತೆ ತಾರೋ ನೀ ಪೋಗಿ 1

ಸ್ವಾಮಿ ಪಾಲಿಸೊ ಅಪ್ಪಣೆ ನಾ ಮುಂಚೆ ಪೋಗುವೆ |ತಡವ ಮಾಡದೆ ಎಲ್ಲೀಗೆನ್ನ ಭೂಮಿಜಾ ರಮಣ ||ಈ ಮುದ್ರೆ ಕೊಂಡು ಪೋಗೋ ಶಾಮಲಾಪತಿ ದಿಕ್ಕಿಗೆ |ಸಮುದ್ರ ದಾಟಿ ವೇಗಪಾವಮಾನಿಕೇಳೋ 2

ಭೂತಲಾಕಾಶ ಲೋಕಾದಿ ಪಾತಾಳದೊಳಗಿರಲಿ |ನಾ ತರುವೇನು ವಾರ್ತೆ ಜಗನ್ನಾಥಪರಾಕು||ಹೇತರಳತ್ರಿಲೋಕ ವಿಖ್ಯಾತನಾಗಿಹ ರಾವಣ |ಪಾತಕಕೊಂಡು ಪೋಗಿಹ ಸೀತೆಯ ಕೇಳು 3

ಬುದ್ಧಿದೇವ ನೀ ಕೊಟ್ಟಂಥ ಬುದ್ಧಿಯಿಂದಲೇ ಅವನ |ಗುದ್ದಿ ಸರ್ವ ಬಲವನ್ನೂ ಒದ್ದು ಬರುವೆನೊ ||ಮುದ್ದು ಕಂದ ರಕ್ಕಸರವಧ್ಯರೋವರಪಡೆದು |ರುದ್ರನಿಂದ ಮಾಡದಿರೊ ಗದ್ದಲ ಕೇಳೋ 4

ತಂದೆ ರಾಮಾ ನಿನ್ನ ದಯೆಯಿಂದ ಈಡಲ್ಲವೊ ಯನಗೆ |ನಂದಿಧ್ವಜಾ ಈ ರಕ್ಕಸರೊಂದು ತೃಣವೋ ||ಕಂದ ಈ ವೇಳೆಯೊಳೇನು ಬಂದುದನು ಭೋಗಿಸಿ ನಾನು |ಕೊಂದು ಹಾಕುವ ದಿನವೂ ಮುಂದುಂಟು ಕೇಳೋ5

ದೇವಿಯ ನೋಡಿ ಬರುವಾಗ ತಾವಂತು ಕೆಣಕಲು ದಾ- |ನವರು ಸುಮ್ಮನಿರಲೇನು ದೇವದೇವೇಶ ||ಕೋವಿದಾಗ್ರೇಶನೆ ನೀನು ಸಾವಿರಾಳಿಗೆ ಒಬ್ಬನೇ |ಆ ವಿಚಾರ ಮನಕೆ ತರುವದೇ ಕೇಳೋ 6

ಹೇಳಿದ ಮಾತು ಕಟ್ಟಿದ ಕೂಳು ನಿಲ್ಲವೊ | ಆ ವನ-ದೊಳೇನಹದೊ ಬಲ್ಲೆನೇ ಪ್ರಾಣೇಶ ವಿಠಲಾ ||ಬಾಲಕ ಹನುಮಂತ ನಿನ್ನೊಳಗೆನ್ನಾ ರಾಣಿಯಲ್ಲಿ- |ಹಳೋ ನೋಡಿ ಬರುವುದಕಾಲಸ್ಯ ಕೇಳೋ 7
********

No comments:

Post a Comment