Thursday, 14 November 2019

ಭಂಡು ಮಾಡದಿರು ಬೆಣ್ಣೆಗಳ್ಳ ankita prasannavenkata

by ಪ್ರಸನ್ನವೆಂಕಟದಾಸರು
ಭಂಡು ಮಾಡದಿರು ಬೆಣ್ಣೆಗಳ್ಳ ಈಪುಂಡತನ ನಿನಗೆ ಸಲ್ಲಪರಹೆಂಡಿರೆಳೆಯದಿರೊ ಹೀಗೆಲ್ಲ ಅತ್ತೆಕಂಡರೆ ಕೊಲ್ವಳೊ ಗೋಪಿನಲ್ಲ ಪ.

ನೀರೆಯರಾಟವೆ ನಿನಗಲ್ಲನಗಬಾರದು ಪರಾಂಗನೆರೊಳು ಚೆಲ್ವವಾರಿಜಾಕ್ಷಿಯರಪ್ಪಿ ಎತ್ತಿಹ್ಯಲ್ಲ ಕೂಗದಿರೊ ಬಾಗಿಲೊಳು ಮಾವಹೊಲ್ಲ1

ಹೆಜ್ಜೆ ಹೆಜ್ಜೆಗ್ಹುಚ್ಚ ಮಾಡಿದೆಲ್ಲ ನಿನ್ನಕಜ್ಜದೊಳು ಕರುಣಿನಿತಿಲ್ಲ ಧರ್ಮರಾಜ್ಯದೊಳು ಚಾರವೃತ್ತಿಯಿಲ್ಲ ನಮ್ಮಲಜ್ಜೆ ಸೂರ್ಯಾಡಿದೆ ಅಂಜಿಕಿಲ್ಲ 2

ಬುದ್ಧಿ ಸತ್ಯ ಮಾತು ಮಿಥ್ಯವಲ್ಲ ಪೂರ್ಣಶುದ್ಧ ನಂಬಿದೆವೊ ಮೃದುಸೊಲ್ಲ ಇನ್ನುಸದ್ದು ಮಾಡದೆ ಕೂಡೆ ಠಾವಿಲ್ಲ ನಮ್ಮಮುದ್ದಿಸೊ ಪ್ರಸನ್ವೆಂಕಟ ನಲ್ಲ 3
******

No comments:

Post a Comment