Monday, 18 November 2019

ಸಲಹೋ ಜಡಚೇತನನಿಲಯಶ್ರೀ ಹನುಮಂತ ankita pranesha vittala

by ಪ್ರಾಣೇಶದಾಸರು
ಸಲಹೋ ಜಡಚೇತನನಿಲಯಶ್ರೀ ಹನುಮಂತ |ಕಲುಷವಿದೂರ ಶಾಂತ ಪ

ಕುಲಿಶಬಾಧೆಗೆ ನೀನೆ ಗತಿಯೆಂದು ಮರೆಹೊಕ್ಕೆ |ಕುಲಜ ಪಾಲಕ ಹರಿಕುಲಜ ದಯಾಂಬುಧೇ ಅ.ಪ.

ಕಂಜಚರಣಗದಾ ಕಂಜಧರನಪಾದಕಂಜಮಧುಪಮುನಿಪ |ಕಂಜವದನನಭಕಂಜಸುರಪರವಿಕಂಜವಿನುತವಿಚಿತ ||ಕಂಜಕೇತನ ಕಂಜಪಕ್ಷ ಖಳಸೂದನಕಂಜನಾಶನ ಭಾವೀಕಂಜದಯಾಂಬುಧೇ 1

ಕಾಲನೇಮಿಹನಿಚ್ಛೆ ಹೀಗೆಂದು ತಿಳಿದು ಆಕಾಲಜನನುಸರಿಸಿ |ಕಾಲಕಳೆದು ವಿಪಿನಾಜ್ಞಾತವಾಸದಿಕಾಲಾರಿ ಪಾಲಿಸಿದೆ ||ಕಾಲು ಪಿಡಿದವನ ಶಾಪವ ಕಳೆದೆ ಆವ |ಕಾಲಕು ನೀನೇಗತಿಜಗಕೆ ದಯಾಂಬುಧೇ 2

ಪ್ರಾಣಾಪಾನ ವ್ಯಾನೋದಾನ ಸಮಾನ ಹೇ ಜಗ-ತ್ಪ್ರಾಣಸಮೀರಜ್ಞಾನ |ಪ್ರಾಣಾಧಿಪೂರ್ಣಾಧಿ ಪ್ರಾಣ ನಂದನ ತಿರಸ್ಕøತಪಾಂಚಾಲಸುತಾ ||ಪ್ರಾಣದೊಡೆಯ ನೀನೊಲಿಯದೆ ಎಂದಿಗೂ |ಪ್ರಾಣೇಶ ವಿಠಲನ ಕಾಣೆ ದಯಾಂಬುಧೆ 3
*******

No comments:

Post a Comment