Tuesday 12 November 2019

ದೂರ ನೋಡುವುದುಚಿತವಲ್ಲವೋ ankita pranesha vittala

by ಪ್ರಾಣೇಶದಾಸರು
ದೂರ ನೋಡುವುದುಚಿತವಲ್ಲವೋ ವಾರವಾರಕೆ ಬಿಡದೆ ತುತಿಪೆ |ಮೀರಿದವನೆ ನಾ ನಿನಗೆ ಪವನ ಪ

ರಾಮಚಂದ್ರನ ಸೇವೆಯ ನಿ-ಷ್ಕಾಮದಿಂದ ಮಾಡಿ ಬಹಳ |ತಾಮಸಜನಂಗಳ ತಂದೆನೀಂ ಮಹಾ ಸಮರ್ಥನೆಂದೇ ||ನೀ ಮನೆಯಿಲ್ಲದವನು ಎಂದೆನೆ | ಕೋತಿರೂಪಈ ಮುಖವು ಹೀಗೆ ಅಂದೆನೆ | ನಗವ ಪೊತ್ತಿಭೂಮಿಯೊಳಗೆ ಕಠಿಣನೆಂದೆನೆ | ಹನುಮನೆ 1

ಪೊಕ್ಕು ರಣಕೆ ಹೆಜ್ಜೆಯ ಹಿಂದಕೆಯಿಕ್ಕದೆ ಭುಜವ ಚಪ್ಪರಿಸಲಾಗ |ನಕ್ಕವರ ಬಲ ಹುರಿದು ಹೋಯಿತು |ಅಕ್ಕಟಕ್ಕಟಾ ನೀ ವೀರನೆಂದೇ ||ರಕುತವ ಕುಡಿದ ನೀಚನೆಂದೆನೇ | ತಿಂದು ತಿಂದಿರಕ್ಕಸಿಯನು ಕೂಡಿದನೆಂದೆನೇ | ಒಡಲ ಬಾಕಸೊಕ್ಕು ನಿನಗೆ ಬಹಳವೆಂದೆನೇ | ಭೀಮನೇ 2

ತಿಳಿದು ಪ್ರಾಣೇಶ ವಿಠಲನಿಚ್ಛೆ |ಇಳೆಯೊಳುದಿಸಿ ಹಲವು ಮತವ ||ನೆಲಕೆವೊರಿಸಿ ಮರುತ ಮತವ |ನಿಲ ಹಾಕಿದ ಗುರುಗಳೆಂದೇ ||ತುಳುವರಲ್ಲಿ ಪುಟ್ಟಿದೆಯೆಂದೆನೇ | ಬಹಳ ಗುಗ್ಗರಿಮೆಲಿದ ಭೂತ ಮಗುವು ಎಂದೆನೇ |ಭಾರತೀಶಸಲಹೋ ಬಿಡದತಿಮ್ಮನೆಂದರೆ | ಮಧ್ವನೇ 3
*********

No comments:

Post a Comment