Wednesday, 13 November 2019

ನೀನೇಯೆಂದು ಮರೆ ಹೊಕ್ಕೆನೋ ರಂಗ ankita pranesha vittala

by ಪ್ರಾಣೇಶದಾಸರು
ನೀನೇಯೆಂದು ಮರೆ ಹೊಕ್ಕೆನೋ ರಂಗ |ದೀನ ಜನರ ಪಾಲಿಪ ದಯಾಸಾಗರ ಪ

ಉತ್ತಮ ದ್ವಿಜರು ಮನೆಗೆ ಬರಲು |ಪ್ರತ್ಯುತ್ಥಾನವ ಕೊಡದಲೆ ಉ ||ನ್ಮತ್ತತನದಿ ಬಹು ಪಾಪವ ಗಳಿಸಿದೆ |ಚಿತ್ತಜಜನಕನೆ ದೋಷನಗ ಕುಲಿಶ 1

ಪಾತ್ರರ ಸಂಗಡ ಕ್ಷೇತ್ರಗಳ |ಯಾತ್ರೆ ಚರಿಸದೆ ನಿರರ್ಥಕದಿ ||ಗಾತ್ರವ ಬೆಳಸಿದೆ ರುಕ್ಮಿಣೀವರನೆ ವಿ- |ಧಾತೃ ಕರಾರ್ಚಿತ ಕುಂದನೆಣಿಸದಿರು 2

ಸ್ನಾನ ಸಂಧ್ಯಾವಂದನೆ ಬಿಟ್ಟು |ಜ್ಞಾನಿಗಳಾದವರನು ಹಳಿವೆನು ||ಧ್ಯಾನಿಪೆ ಸರ್ವದಾ ಪರರ ಕೇಡನು |ಏನೆಂಧೇಳಲಿ ಯನ್ನಯ ಅವಗುಣ 3

ಮರೆತಾದರೂ ಹರಿಯೆಂದೊಮ್ಮೆ |ಸ್ಮರಿಸಿದವರ ದುರ್ಗುಣಗಳನು ||ಪೊರೆವನೆಂಬ ನಿನ ಬಿರುದುಕೇಳಿಪದ |ಸರಸಿಜಕೆರಗಿದೆ ಕರುಣಿಸೋ ಮಾಧವ 4

ಪುಸಿಯಲ್ಲವೋ ಇದು ಅಜಾಮಿಳ |ಪೆಸರಾಗಿಹ ಪಾಪಿಷ್ಠರೊಳು ||ವಶ ಮೀರಿ ಸುತನ ಕರೆಯಲಾಕ್ಷಣ |ಪೋಷಿಸಿದೆ ತ್ವರದಿ ಶ್ರೀ ಪ್ರಾಣೇಶ ವಿಠ್ಠಲಾ 5
********

No comments:

Post a Comment