Tuesday, 15 October 2019

ತಾತ್ತ್ವಿಕತೆ ಆರಿಗಾದರು ಪೂರ್ವಕರ್ಮ ankita neleyadikeshava

ಕನಕದಾಸ
ತಾತ್ತ್ವಿಕತೆ ಆರಿಗಾದರು ಪೂರ್ವಕರ್ಮ ಬಿಡದುವಾರಿಜೋದ್ಭವಅಜಭವಾದಿಗಳ ಕಾಡುತಿಹುದು ಪ 

xmಟ veಡಿsioಟಿ='1.0' eಟಿಛಿoಜiಟಿg='%SಔUP-ಇಓಅಔಆIಓಉ%'
ವೀರಭೈರವನಂತೆ ತಾನು ಬತ್ತಲೆಯಂತೆಮಾರಿಮಸಣಿಗಳಂತೆ ತಿರಿದು ತಿಂಬರಂತೆಸೂರ್ಯ ಚಂದ್ರಮರಂತೆ ರಾಹುವಟ್ಟುಳಿಯಂತೆಮೂರೆರಡು ತಲೆ ಹರಗೆ ಕೈಲಿ ಕಪ್ಪರವಂತೆ1

ಶಿಷ್ಟ ಹರಿಶ್ಚಂದ್ರನಿಗೆ ಮಸಣದಡಿಗೆಯಂತೆಸೃಷ್ಟಿಸುವ ಬೊಮ್ಮನಿಗೆ ಶಿರ ಹೋಯಿತಂತೆಅಷ್ಟದಿಕಾಲ್ಪಕರು ಸೆರೆಯಾಗಿರುವರಂತೆಕಟ್ಟುಗ್ರದಿಂದ್ರನಿಗೆ ಮೈಯೆಲ್ಲ ಕಣ್ಣಂತೆ2

ಹನ್ನೊಂದಕ್ಷೋಹಿಣಿ ಬಲವುಳ್ಳ ಕೌರವನುರಣದೊಳಗೆ ತೊಡೆಮುರಿದು ಬಿದ್ದನಂತೆವನಜಾಕ್ಷ ಸಿರಿಯರಸ ಬಲಿಯ ಬೇಡಿದನಂತೆವನಿತೆ ಧರ್ಮಜನ ತಾಯ್ತಿರಿದುಂಡಳಂತೆ3

ಧರೆಗೆ ಧರ್ಮಜನಂತೆ ಕಂಕಭಟ್ಟನಂತೆಶೂರ ಭೀಮನು ಬಾಣಸಿಗನಾದನಂತೆವೀರ ಫಲುಗುಣನಂತೆ ಕೈಯೊಳಗೆ ಬಳೆಯಂತೆಕಿರಿಯ ನಕುಲ ಸಹದೇವರು ತುರುಗಾಯ್ದರಂತೆ4

ಹರನ ವಾಹನವಂತೆ ಹುಲ್ಲು ತಿಂಬುವುದಂತೆವಿರಿಂಚಿವಾಹನವಂತೆಕಮಲಭಕ್ಷಿಪನಂತೆಹರಿಯ ಹೊತ್ತಿಹನಂತೆ ಹಾವು ಭಕ್ಷಿಪನಂತೆಸಿರಿಯಾದಿಕೇಶವನು ತಾ ಬೆಣ್ಣೆಗಳ್ಳನಂತೆ5
********

No comments:

Post a Comment